Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅರ್ಜೆಂಟೀನಾದಲ್ಲಿ 26 ಮೀಟರ್ ಎತ್ತರದ ದೈತ್ಯ ಪ್ರತಿಮೆ ಅನಾವರಣ

Spread the love

ಬ್ಯುನಸ್ ಐರಿಸ್: ಫಿಫಾ ವಿಶ್ವಕಪ್ ಸಮಯದಲ್ಲಿ ಅರ್ಜೆಂಟೀನದಲ್ಲಿ ಲಿಯೊನೆಲ್ ಮೆಸ್ಸಿ ಮೇಲಿನ ಪ್ರೀತಿ ಹೆಚ್ಚಾಗಿದೆ. ಪ್ಯಾಟಗೋನಿಯಾದಲ್ಲಿ ಫುಟ್ಬಾಲ್ ಐಕಾನ್‌ನ 26 ಮೀಟರ್ ಎತ್ತರದ ದೈತ್ಯದ ಪ್ರತಿಮೆ ಅನಾವರಣಗೊಂಡಿದೆ. ಅಭಿಮಾನಿಗಳಿಂದ ನಿರ್ಮಿಸಲ್ಪಟ್ಟ ಪ್ರತಿಮೆಯು ದೇಶಾದ್ಯಂತ ಗಮನ ಸೆಳೆಯುತ್ತಿದೆ.
ದಕ್ಷಿಣ ಅರ್ಜೆಂಟೀನದ ಕಟ್ರಲ್ ಕೋ ಪಟ್ಟಣದ ಹೊರ ವಲಯದಲ್ಲಿರುವ ಈ ಬೃಹತ್ ಪ್ರತಿಮೆ 70 ಟನ್ ಉಕ್ಕು ಹಾಗೂ ಕಬ್ಬಿಣದಿಂದ ತಯಾರಿಸಲ್ಪಟ್ಟಿದೆ. ಮೆಸ್ಸಿ ಅವರು ವಿಶ್ವಕಪ್ ಟ್ರೋಫಿಯೊಂದಿಗೆ ಮಂಡಿಯೂರಿ ಕುಳಿತ್ತಿರುವ ಚಿತ್ರವು ಪ್ರತಿಮೆಯಲ್ಲಿ ಮೂಡಿಬಂದಿದೆ.
ಈ ಪ್ರತಿಮೆಯನ್ನು ಜೂ.16ರಂದು ಅರ್ಜೆಂಟೀನ ತಂಡ ವಿಶ್ವಕಪ್ ಅಭಿಯಾನ ಆರಂಭಿಸಿದ ದಿನದಂದೇ ಉದ್ಘಾಟಿಸಲಾಗಿತ್ತು. ಬುಧವಾರ 39ನೇ ವರ್ಷಕ್ಕೆ ಕಾಲಿಟ್ಟಿರುವ ಅರ್ಜೆಂಟೀನದ ನಾಯಕನಿಗೆ ಮೀಸಲಾಗಿರುವ ಅತಿ ದೊಡ್ಡ ಸ್ಮಾರಕ ಇದಾಗಿದೆ.
ಈ ಪ್ರತಿಮೆಯನ್ನು ಶಿಲ್ಪಿ ಆಲ್ಲೊ ಬೆರೋಯಿಸಾ ರಚಿಸಿದ್ದಾರೆ. ಇದನ್ನು ಪೂರ್ಣಗೊಳಿಸಲು ಅವರು 18 ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಈ ಪ್ರತಿಮೆಯ ರಚನೆಗೆ ಸಹಾಯ ಮಾಡಿರುವ 1,300ಕ್ಕೂ ಅಧಿಕ ಅಭಿಮಾನಿಗಳ ಹೆಸರನ್ನು ಈ ಪ್ರತಿಮೆ ಹೊಂದಿದೆ.


Spread the love
Share:

administrator

Leave a Reply

Your email address will not be published. Required fields are marked *