Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಕಿರುಕು*ಳ ನೀಡುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ

Spread the love

ಬೆಂಗಳೂರು: ದಿನನಿತ್ಯ ಮದ್ಯಪಾನ ಮಾಡಿ ನಿಂದಿಸಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ.
ರಾಜಶೇಖ‌ರ್ ಕೊಲೆಯಾದವರು. ಅವರ ಪತ್ನಿ ಮಾಲಾಶ್ರೀ ಕೊಲೆ ಆರೋಪಿ. ಕೆಂಪೇಗೌಡ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ವೊಂದದರ ಕೆಲಸ ಮಾಡುತ್ತಿದ್ದ ರಾಜಶೇಖರ್ ಹಾಗೂ ಮಾಲಾಶ್ರೀ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಇವರಿಗೆ ಇಲ್ಲಿವರೆಗೂ ಮಕ್ಕಳಾಗಿಲ್ಲ. ಕೆಲ ದಿನಗಳಿಂದ ಇದೇ ವಿಚಾರ ಮುಂದಿಟ್ಟು ಮದ್ಯಪಾನ ಮಾಡಿ ಬರುತ್ತಿದ್ದ ರಾಜಶೇಖ‌ರ್ ಪತ್ನಿಯನ್ನು ಮಕ್ಕಳಾಗಿಲ್ಲ ನೀನು ಬಂಜೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನೆನ್ನಲಾಗಿದೆ. ಬುಧವಾರ ಮಧ್ಯಾಹ್ನವೂ ಇದೇರೀತಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ರಾಜಶೇಖರ ಪತ್ನಿಯನ್ನು ಹೀಯಾಳಿಸಲು ಶುರು ಮಾಡಿದ್ದಾನೆ. ಈ ವೇಳೆ ಆರೋಪಿ ಮಾಲಾಶ್ರೀ ಚಾಕುವಿನಿಂದ ಇರಿದು ರಾಜಶೇಖರರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *