Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳ್ತಂಗಡಿ: ಹೆದ್ದಾರಿ ಕಾಮಗಾರಿ ವೇಳೆ ಕಟ್ಟಡದ ಸಿಮೆಂಟ್ ಚಾವಣಿ ಕುಸಿದು ಕಡಬ ಮೂಲದ ಕಾರ್ಮಿಕ ದುರ್ಮರ*ಣ!

Spread the love

ಬೆಳ್ತಂಗಡಿ ಸೆಪ್ಟೆಂಬರ್ 18: ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಭಾಗವಾಗಿ ಬೆಳ್ತಂಗಡಿ ನಗರದಲ್ಲಿ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಮೇಲ್ಭಾಗದ ಸಿಮೆಂಟ್ ಚಾವಣಿ ಕುಸಿದುಬಿದ್ದು ಕಾರ್ಮಿಕನೊಬ್ಬ ದುರಂತವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಆಲಿ ಎಂಬವರ ಪುತ್ರ ಝುಬೈರ್ (22) ಮೃತಪಟ್ಟ ದುರದೃಷ್ಟಕರ ಯುವ ಕಾರ್ಮಿಕ.

ಬೆಳ್ತಂಗಡಿ ನಗರದ ಮೂರು ಮಾರ್ಗದ ಸಮೀಪದಲ್ಲಿರುವ ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಮಳಿಗೆಯ ಕಟ್ಟಡವನ್ನು ಹೆದ್ದಾರಿ ಅಗಲೀಕರಣಕ್ಕಾಗಿ ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಕಟ್ಟಡದ ಮೇಲ್ಭಾಗದಲ್ಲಿ ರಾಡ್ ಹಾಗೂ ಸಿಮೆಂಟ್ ತೆರವುಗೊಳಿಸುವ ಕಾರ್ಯ ಮತ್ತು ಕೆಳಭಾಗದ ಕಾಮಗಾರಿ ಒಂದೇ ಸಮಯದಲ್ಲಿ ನಡೆಯುತ್ತಿತ್ತು. ಕೆಳಭಾಗದಲ್ಲಿ ಝುಬೈರ್ ಕೆಲಸ ಮಾಡುತ್ತಿದ್ದಾಗ, ದಿಢೀರನೆ ಕಟ್ಟಡದ ಮೇಲ್ಭಾಗ ಕುಸಿದು ಆತನ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ 


Spread the love
Share:

administrator

Leave a Reply

Your email address will not be published. Required fields are marked *