Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿ: ಚವಾಟ ಗಲ್ಲಿಯಲ್ಲಿ ಹಳೆಯ ಫ್ರಿಜ್ ಸ್ಫೋಟಗೊಂಡು ಅಗ್ನಿ ಅವಘಡ – ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಜೀವ ದಹನ!

Spread the love

ಬೆಳಗಾವಿ ಸೆಪ್ಟೆಂಬರ್ 15: ಚವಾಟ ಗಲ್ಲಿಯಲ್ಲಿ ಸೋಮವಾರ ತಡರಾತ್ರಿ ಹಳೆಯ ಫ್ರಿಜ್‌ ಸ್ಫೋಟಗೊಂಡ ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ನಾಲ್ವರು ಹೆಣ್ಣುಮಕ್ಕಳು ಸಜೀವ ದಹನಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಪುರುಷರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ.ಶಾರದಾ ದಾಮೋನೆ (45), ಅವರ ಪುತ್ರಿಯರಾದ ಪ್ರಿಯಾ ಗಜಾನನ ದಾಮೋನೆ (28), ಗಂಗಾ ಗಜಾನನ ದಾಮೋನೆ (25) ಹಾಗೂ ಇವರ ಅತ್ತೆ ಭಾರತಿ ರಾಜಾರಾಮ ದಾಮೋನೆ (50) ಮೃತಪಟ್ಟ ದುರ್ದೈವಿಗಳು.
ಚವಾಟ ಗಲ್ಲಿಯ ತಗಡು ಮತ್ತು ಕಟ್ಟಿಗೆಯಿಂದ ನಿರ್ಮಿಸಲಾಗಿದ್ದ ಸಣ್ಣ ಮನೆಯಲ್ಲಿ ಈ ಕುಟುಂಬ ವಾಸವಾಗಿತ್ತು. ಇತ್ತೀಚೆಗಷ್ಟೇ ಅವರು ಸೆಕೆಂಡ್ ಹ್ಯಾಂಡ್ ಫ್ರಿಜ್ ಒಂದನ್ನು ಖರೀದಿಸಿ ತಂದಿದ್ದರು. ಸೋಮವಾರ ತಡರಾತ್ರಿ ಈ ಫ್ರಿಜ್‌ನಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡು ಭೀಕರವಾಗಿ ಸ್ಫೋಟಗೊಂಡಿದೆ. ಪರಿಣಾಮ ಇಡೀ ಮನೆಗೆ ಬೆಂಕಿ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕುಟುಂಬದ ಮುಖ್ಯಸ್ಥ ಗಜಾನನ ರಾಜಾರಾಮ ದಾಮೋನೆ (65) ಹಾಗೂ ಅವರ ಪುತ್ರ ರೋಷನ್ ದಾಮೋನೆ (21) ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡು ಹೊರ ಓಡಿ ಬಂದಿದ್ದಾರೆ. ಆದರೆ ಅವರಿಗೂ ಶೇಕಡಾ 90ರಷ್ಟು ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


Spread the love
Share:

administrator

Leave a Reply

Your email address will not be published. Required fields are marked *