Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಂಟ್ವಾಳ: ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನ-ನಗದು ದೋಚಿದ ಖದೀಮರು!

Spread the love

ಬಂಟ್ವಾಳ :  ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಖದೀಮರು, ಮನೆಯ ಮುಂಭಾಗದ ಬಾಗಿಲು ಹಾಗೂ ಗಾಡ್ರೇಜ್ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿರುವ ಘಟನೆ ಬಿ.ಸಿ. ರೋಡ್‌ನಲ್ಲಿ ನಡೆದಿದೆ. ಬಿ.ಸಿ. ರೋಡ್ ಬಸ್ ಸ್ಟ್ಯಾಂಡ್ ಹಿಂಭಾಗದ ಬಿ. ಮೂಡ ಗ್ರಾಮದ ‘ಅನುಗ್ರಹ’ ನಿವಾಸಿ ಶೃತಿ ಪೈ (35) ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ದೂರುದಾರೆ  ಶೃತಿ ಪೈ ಅವರು ತಮ್ಮ ಅತ್ತೆಯನ್ನು ಗೋವಾ ರಾಜ್ಯದ ಮಡಗಾಂವ್‌ನಲ್ಲಿರುವ ತವರ ಮನೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ದಿನಾಂಕ 04-09-2026 ರಂದು ಸಂಜೆ ಗೋವಾದಿಂದ ವಾಪಸ್‌ ಬಂದ ಅವರು, ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು.

ದಿನಾಂಕ 06-09-2026 ರಂದು ಬೆಳಿಗ್ಗೆ 11:00 ಗಂಟೆಗೆ ಮಂಗಳೂರಿನಿಂದ ಬಿ.ಸಿ. ರೋಡ್‌ನ ಮನೆಗೆ ವಾಪಸ್ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮುಂಭಾಗದ ಬಾಗಿಲು ತೆರೆದಿದ್ದು, ಒಳಗೆ ಹೋಗಿ ಪರಿಶೀಲಿಸಿದಾಗ ಮೂರು ಕೊಠಡಿಗಳ ಬೀಗ ಒಡೆದು ಹಾಕಿರುವುದು ಕಂಡುಬಂದಿದೆ. ಗಾಡ್ರೇಜ್‌ನಲ್ಲಿದ್ದ ಬಟ್ಟೆ ಹಾಗೂ ಗೃಹ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದ ಕಳ್ಳರು, ಒಳಗೆ ಇರಿಸಲಾಗಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಕಳವಾದ ವಸ್ತುಗಳ ವಿವರ:

  • ನಗದು ಹಣ: ₹50,000
  • ಚಿನ್ನದ ಆಭರಣಗಳು: ಅತ್ತೆ ಧರಿಸುತ್ತಿದ್ದ ನವಿಲು ವಿನ್ಯಾಸದ ಬೆಂಡೋಲೆಗಳು (8 ಗ್ರಾಂ, ಮೌಲ್ಯ ₹96,000) ಹಾಗೂ ಏರಿಯಲ್ ಚೈನ್ (8 ಗ್ರಾಂ, ಮೌಲ್ಯ ₹96,000)
  • ಬೆಳ್ಳಿಯ ವಸ್ತುಗಳು: ಸುಮಾರು ₹58,000 ಮೌಲ್ಯದ ಬೆಳ್ಳಿ ಆಭರಣ/ಸಾಮಗ್ರಿಗಳು

ಒಟ್ಟು ಕಳುವಾದ ನಗದು, ಚಿನ್ನ ಹಾಗೂ ಬೆಳ್ಳಿಯ ಅಂದಾಜು ಮೌಲ್ಯ ₹3,00,000 (3 ಲಕ್ಷ ರೂಪಾಯಿ) ಎಂದು ಅಂದಾಜಿಸಲಾಗಿದೆ. ಘಟನೆ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *