ಏಷ್ಯನ್ ಮಾಸ್ಟರ್ಸ್ ಈಜು ಸ್ಪರ್ಧೆ: ಎಎಸ್ಐ ಗಿರೀಶ್ ಸುವರ್ಣಗೆ ಕಂಚಿನ ಪದಕ!

ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಚಾಂಪಿಯನ್ಶಿಪ್-2026ರಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ಎಎಸ್ಐ ಗಿರೀಶ್ ಸುವರ್ಣ ಕಂಚಿನ ಪದಕ ಗೆದ್ದಿದ್ದಾರೆ.ಈ ಹಿಂದೆ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಗಿರೀಶ್ ಸುವರ್ಣ, ಹಿಂದಿನ ಸ್ಪರ್ಧೆಯಲ್ಲಿ ದಾಖಲಿಸಿದ್ದ ಸಮಯದ ಆಧಾರದ ಮೇಲೆ ಎರಡನೇ ಏಷ್ಯನ್ ಮಾಸ್ಟರ್ಸ್ ಈಜು ಸ್ಪರ್ಧೆಯ ಬ್ಯಾಕ್ಸ್ಟೋಕ್ ವಿಭಾಗಕ್ಕೆ ಆಯ್ಕೆಯಾಗಿದ್ದರು. ಇದೀಗ ಏಷ್ಯನ್ ಮಟ್ಟದ ಸ್ಪರ್ಧೆಯಲ್ಲೂ ಬ್ಯಾಕ್ಸ್ಟೋಕ್ ವಿಭಾಗದಲ್ಲಿ ಕಂಚಿನ ಪದಕ ಪಡೆದು ಗಮನಾರ್ಹ ಮಾಡಿದ್ದಾರೆ.
