Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏಷ್ಯನ್ ಗೇಮ್ಸ್ 2026: ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಶೂಟರ್ ಇಶಾ ಸಿಂಗ್‌ಗೆ ಬೆಳ್ಳಿ ಪದಕ!

Spread the love

ಹೊಸದಿಲ್ಲಿ: ಏಷ್ಯನ್ ಗೇಮ್ಸ್ 2026ರ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ. ತಂಡ ಸ್ಪರ್ಧೆಯಲ್ಲಿ ಪದಕ ವಂಚಿತರಾದ ಬಳಿಕ ವೈಯಕ್ತಿಕ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ವಿಶ್ವದ ನಂಬರ್ 1 ಶೂಟರ್ ಹಾಗೂ ವಿಶ್ವ ದಾಖಲೆ ಹೊಂದಿರುವ ಇಶಾ ಸಿಂಗ್‌ ಫೈನಲ್‌ನಲ್ಲಿ 38 ಹಿಟ್‌ಗಳೊಂದಿಗೆ ಚೀನಾದ ಕ್ಷಿಯಾವೊ ಜಿಯಾರುಯಿಕ್ಸುವಾನ್ ಅವರೊಂದಿಗೆ ಸಮಬಲ ಸಾಧಿಸಿದರು. ಚಿನ್ನದ ಪದಕ ನಿರ್ಧರಿಸಲು ನಡೆದ ಶೂಟ್‌ಆಫ್‌ನಲ್ಲಿ ಕ್ರಿಯಾವೊ 4+3 ಅಂಕ ಗಳಿಸಿದರೆ, ಇಶಾ 4+2 ಅಂಕ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು.

ಫೈನಲ್‌ನಲ್ಲಿ ಈಶಾ ಆರಂಭದಲ್ಲೇ ಉತ್ತಮ ಪ್ರದರ್ಶನ ನೀಡಿದ್ದು ಮೊದಲ ಮೂರು ಸರಣಿಗಳಲ್ಲಿ ಕ್ರಮವಾಗಿ 5, 4 ಮತ್ತು 3 ಹಿಟ್‌ಗಳನ್ನು ದಾಖಲಿಸಿದರು. ನಂತರದ ಏಳು ಸರಣಿಗಳಲ್ಲಿ 4, 4, 3, 3, 5, 3 ಮತ್ತು 4 ಹಿಟ್‌ಗಳನ್ನು ಗಳಿಸಿದರು.
ಚೀನಾದ ಕ್ಸಿಯಾವೊ ಜಿಯಾರುಯಿಕ್ಷುವಾನ್ ಚಿನ್ನ ದಕ್ಷಿಣ ಕೊರಿಯಾದ ಕಿಮ್ ಹ್ಯುನ್ ಸನ್ 34 ಹಿಟ್‌ಗಳೊಂದಿಗೆ ಕಂಚಿನ ಪದಕ ಗೆದ್ದರು. ವಿಯೆಟ್ನಾಂನ ತ್ರಿನ್ ಥು ವಿನ್ಸ್ ನಾಲ್ಕನೇ ಹಾಗೂ ಚೀನಾದ ಶಾಂಗ್ ಕೈಯಾನ್ ಐದನೇ ಸ್ಥಾನ ಪಡೆದರು.
2023ರ ಹ್ಯಾಂಗೌಏಷ್ಯನ್ ಗೇಮ್ಸ್‌ ನಲ್ಲೂ ಇಶಾ ಸಿಂಗ್ ವೈಯಕ್ತಿಕ 25 ಮೀಟ‌ರ್ ಪಿಸ್ತೂಲ್‌ನಲ್ಲಿ ಬೆಳ್ಳಿ ಹಾಗೂ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.


Spread the love
Share:

administrator

Leave a Reply

Your email address will not be published. Required fields are marked *