Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏಷ್ಯನ್ ಗೇಮ್ಸ್ 2026: ಶೂಟಿಂಗ್ ಮಹಿಳೆಯರ ಟ್ರಾಪ್ ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ!

Spread the love

ಹೊಸದಿಲ್ಲಿ/ ನಗೋಯಾ: ಜಪಾನ್ ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ನಲ್ಲಿ ಮಂಗಳವಾರ ಶೂಟಿಂಗ್ ನ ಮಹಿಳೆಯರ ಟ್ಯಾಪ್ ತಂಡ ಸ್ಪರ್ಧೆಯಲ್ಲಿ ನೀರು ದಂಡಾ, ಅಶಿಮಾ ಅಹ್ಲಾವತ್ ಹಾಗೂ ಮನೀಷಾ ಕೀರ್ ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ.
ಭಾರತ ತಂಡ ಒಟ್ಟು 328 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದೆ. 325 ಅಂಕ ಗಳಿಸಿದ ಕುವೈತ್ ಕಂಚಿನ ಪದಕ ಗೆದ್ದರೆ, 346 ಅಂಕಗಳೊಂದಿಗೆ ಚೀನಾ ಚಿನ್ನದ ಪದಕ ಗೆದ್ದಿದೆ.
ಭಾರತದ ಪರ ನೀರು ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ್ದು, 125ರಲ್ಲಿ 118 ಅಂಕ ಗಳಿಸಿದರು. ಆಶಿಮಾ ಅಹ್ಲಾವತ್ 106 ಹಾಗೂ ಮನೀಷಾ ಕೀರ್ 104 ಅಂಕ ಗಳಿಸಿದರು.
ವೈಯಕ್ತಿಕ ಅರ್ಹತಾ ಸುತ್ತಿನಲ್ಲೂ ನೀರು ಗಮನಾರ್ಹ ಸಾಧನೆ ಮಾಡಿದ್ದು ಖತರ್ ನ ರೇ ಬಸಿಲ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ.
ಮಂಗಳವಾರ ನಡೆಯಲಿರುವ ವೈಯಕ್ತಿಕ ಫೈನಲ್ ನಲ್ಲಿ ನೀರು ದಂಡಾ ಕಣಕ್ಕಿಳಿಯಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *