Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಣಿಪಾಲ: ಎಂಐಟಿ ಹಾಸ್ಟೆಲ್‌ನಲ್ಲಿ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹ*ತ್ಯೆ – ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಯಾ ಪರ್ಗಿ ಮೃತದೇಹ ಪತ್ತೆ!

Spread the love

ಮಣಿಪಾಲ : ಮಣಿಪಾಲ ತಾಂತ್ರಿಕ ಸಂಸ್ಥೆಯ (MIT Campus) ಲೇಡಿಸ್ ಹಾಸ್ಟೆಲ್‌ನ ಕೊಠಡಿಯೊಂದರಲ್ಲಿ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವೆಂಬರ್ 11ರಂದು ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯನ್ನು ಎಂಐಟಿ ಬಿ.ಟೆಕ್ 3ನೇ ವರ್ಷದ ವಿದ್ಯಾರ್ಥಿನಿ ಶ್ರೀಯಾ ಪರ್ಗಿ (21) ಎಂದು ಗುರುತಿಸಲಾಗಿದೆ. ಈಕೆ ಮಣಿಪಾಲ ಎಂಐಟಿ ಕ್ಯಾಂಪಸ್‌ನ ಲೇಡಿಸ್ ಹಾಸ್ಟೆಲ್‌ನ 4ನೇ ಮಹಡಿಯ ರೂಮ್ ನಲ್ಲಿ ವಾಸ್ತವ್ಯವಿದ್ದರು.

ಎಂಐಟಿ ಕ್ಯಾಂಪಸ್ ಲೇಡಿಸ್ ಹಾಸ್ಟೆಲ್‌ನಲ್ಲಿ ವಾರ್ಡನ್ ನವೆಂಬರ್ 10ರಂದು ರಾತ್ರಿ 9.39ರ ಸುಮಾರಿಗೆ ಶ್ರೀಯಾ ಪರ್ಗಿ ಅವರು ಬಯೋಮೆಟ್ರಿಕ್ ಹಾಜರಾತಿ (Biometric Attendance) ದಾಖಲಿಸಿ ತಮ್ಮ ರೂಮಿಗೆ ತೆರಳಿದ್ದರು. ಆದರೆ, ನವೆಂಬರ್ 11ರಂದು ಶ್ರೀಯಾ ಅವರು ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸಿರಲಿಲ್ಲ ಹಾಗೂ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಅನುಮಾನಗೊಂಡ ಕೇರ್ ಟೇಕರ್ ಸ್ಪೇರ್ ಕೀ (Spare Key) ಬಳಸಿ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಕ್ಯಾಂಪಸ್ ಪೆಟ್ರೋಲ್ ಸಿಬ್ಬಂದಿಯನ್ನು ಕರೆಸಿ ಬಾಗಿಲಿನ ಚಿಲಕ ಮುರಸಿ ಒಳಗೆ ಹೋಗಿ ನೋಡಿದಾಗ, ವಿದ್ಯಾರ್ಥಿನಿ ಫ್ಯಾನ್ ಹುಕ್ಕಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಣಿಪಾಲ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಕ್ರಮಾಂಕ: 57/2026, ಕಲಂ 194 ಬಿಎನ್‌ಎಸ್‌ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *