Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಚ್ಛೇದನಕ್ಕೆ ಒಪ್ಪದ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ!

Spread the love

ಪಾಟ್ನಾ: ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಒಂಬತ್ತೇ ತಿಂಗಳಲ್ಲಿ ಪತಿ (Husband) ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬಿಹಾರದ (Bihar) ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ.

ದಾಮಿನಿ ಕುಮಾರಿ (21) ಕೊಲೆಯಾದ ದುರ್ದೈವಿ. ಸಂಜೀವ್ ಸಾಹ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ದಂಪತಿ ನಡುವೆ ಭಿನ್ನಾಭಿಪ್ರಾಯದಿಂದ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ವಿಚ್ಛೇದನ ನೀಡುವಂತೆ ಪತಿ ತಿಳಿಸಿದ್ದ. ಆದರೆ ಪತ್ನಿ ವಿಚ್ಛೇದನಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಗಲಾಟೆ ನಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಸಂಜೀವ್, ದಾಮಿನಿಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ಓಡಿಬರುತ್ತಿದ್ದ ದಾಮಿನಿಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.

ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಪತ್ನಿಗೆ ತಾನೇ ಬೆಂಕಿ ಹಚ್ಚಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಪಿ, ದಾಮಿನಿಯನ್ನು ಪೂರ್ವ ಕೋಸಿ ಏರಿಯ (Kosi Embankment) ಕಡೆಗೆ ಕರೆದೊಯ್ದಿದ್ದೆ. ದಾರಿಯಲ್ಲಿ ಅಂಗಡಿಯೊಂದರಿಂದ ಪೆಟ್ರೋಲ್ ಖರೀದಿಸಿ, ಅದನ್ನು ದಾಮಿನಿಯ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದ್ದಾಗಿ ಹೇಳಿಕೊಂಡಿದ್ದಾನೆ.ರಾತ್ರಿ 10 ಗಂಟೆ ಸುಮಾರಿಗೆ, ಲಾಲ್ಮನ್‌ಪಟ್ಟಿ ಬಳಿಯ ಕಾಲುವೆಯೊಂದರ ಹತ್ತಿರ ನಿಂತು, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೆ. ಬಳಿಕ ಅಲ್ಲಿಂದ ಪರಾರಿಯಾದೆ. ದಾಮಿನಿ ವಿಚ್ಛೇದನದ ದಾಖಲೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂದು ಹೇಳಿದ್ದಾನೆ.

ಇನ್‌ಸ್ಟಾದಲ್ಲಿ ಪರಿಚಯ, 9 ತಿಂಗಳ ಹಿಂದೆ ಮದುವೆ
ಪೊಲೀಸರ ಮಾಹಿತಿ ಪ್ರಕಾರ, ಸಂಜೀವ್ ಮತ್ತು ದಾಮಿನಿ ಸುಮಾರು ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಒಂಬತ್ತು ತಿಂಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ನಂತರ ದಾಮಿನಿ ಒಮ್ಮೆ ಅವನ ಮನೆಗೆ ಭೇಟಿ ನೀಡಿದ್ದಳು, ಆದರೆ ಮರುದಿನವೇ ಹಿಂತಿರುಗಿದ್ದಳು. ಸಂಜೀವ್ ಆಗಾಗ ತನ್ನ ಪತ್ನಿಯ ಮನೆಗೆ ಭೇಟಿ ನೀಡುತ್ತಿದ್ದ.

ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದಾದ ಬಳಿಕ ಸಂಜೀವ್ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದ. ಆದರೆ ದಾಮಿನಿ ವಿಚ್ಛೇದನಕ್ಕೆ ಒಪ್ಪಲು ಸಿದ್ಧವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ತಂದೆ ವಶಕ್ಕೆ
ಪೊಲೀಸರು ಆರೋಪಿಯ ತಂದೆ ಕಿನು ಸಾಹ್‌ನನ್ನು ಕೂಡ ವಿಚಾರಣೆಗಾಗಿ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಘಟನೆಯಲ್ಲಿ ಆತನ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪವನ್ ಕುಮಾರ್ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *