Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಪ್ರಾಪ್ತನ ಕಾರು ಚಾಲನೆಗೆ ವ್ಯಕ್ತಿ ಬಲಿ: ನ್ಯಾಯಾಧೀಶರ ವಿರುದ್ಧ ಪ್ರಕರಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!

Spread the love

ತಿರುವನಂತಪುರಂ: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಅಪ್ರಾಪ್ತ ಮಗನಿಂದ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಜಡ್ಜ್ ವಿರುದ್ಧವೇ ದೂರು ದಾಖಲಿಸಲು ಕೇರಳ ಹೈಕೋರ್ಟ್ (Kerala High Court) ಅನುಮತಿ ನೀಡಿದೆ.

ಕೇರಳದ ಕೊಚ್ಚಿಯಲ್ಲಿ (Kochi) ನ್ಯಾಯಾಧೀಶರ (Judge) 17 ವರ್ಷದ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆನ್ಜ್ ಕಾರು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಿತ್ತೂರು ಮಂಜಲಿ ನಿವಾಸಿ 54 ವರ್ಷದ ಮೃತ ಜಯಬಾಲಕೃಷ್ಣನ್ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಕೇರಳ ಹೈಕೋರ್ಟ್ 17 ವರ್ಷದ ಮಗನಿಗೆ ಕಾರು ಕೊಟ್ಟ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿದೆ. ಭಾನುವಾರ (ಅ.25) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊಚ್ಚಿಯ ಚೆರಾನೆಲ್ಲೂರು ಸಮೀಪದ ಕಂಟೈನರ್ ರಸ್ತೆಯಲ್ಲಿ ಘಟನೆ ಸಂಭವಿಸಿತ್ತು. ಮೃತ ಜಯಬಾಲಕೃಷ್ಣನ್ ತಮ್ಮ ಸಣ್ಣ ಚಹಾ ಅಂಗಡಿಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದ ವೇಳೆ ಜಡ್ಜ್ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಗುದ್ದಿದೆ.ತಃ ಬಾಲಕ, ಪೋಷಕರ ಒಪ್ಪಿಗೆಯಿಲ್ಲದೆ ತಾನೇ ಕಾರು ತೆಗೆದುಕೊಂಡು ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಆರಂಭದಲ್ಲಿ ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಲಾಗಿತ್ತು. ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳ ನಂತರ, ಪೊಲೀಸರು ಸೆಕ್ಷನ್ 105 ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿ ಬಾಲಕನನ್ನು ಮತ್ತೆ ವಶಕ್ಕೆ ಪಡೆದಿದ್ದರು. ಇದೀಗ ಅಪ್ರಾಪ್ತ ಬಾಲಕನಿಗೆ ಜಾಮೀನು ಸಿಕ್ಕಿದೆ.


Spread the love
Share:

administrator

Leave a Reply

Your email address will not be published. Required fields are marked *