Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕೋಡಿ: ಬೈಕ್‌ಗೆ ಲಾರಿ ಡಿಕ್ಕಿ – ನಿಪ್ಪಾಣಿ ಠಾಣೆ ಮುಖ್ಯಪೇದೆ ಹಾಗೂ ಮಗಳು ಸ್ಥಳದಲ್ಲೇ ದುರ್ಮರ*ಣ!

Spread the love

ಚಿಕ್ಕೋಡಿ: ಇಲ್ಲಿ ನಡೆಯುತ್ತಿದ್ದ ರೈತ ಹೋರಾಟ ಮುಕ್ತಾಯವಾಗಿ ಸಂಚಾರ ಆರಂಭ ಆಗ್ತಿದ್ದಂತೆ ದುರಂತವೊಂದು ಸಂಭವಿಸಿದೆ. ಸ್ಪೀಡ್ ಬ್ರೇಕರ್ ಬಳಿ ಬೈಕ್ ಸ್ಲೋ ಮಾಡ್ತಿದ್ದಂತೆ ಹಿಂದಿನಿಂದ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸ್ತವನಿಧಿ ಘಾಟ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದೆ

ಅಪಘಾತದಲ್ಲಿ ಮೂಲತಃ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದವರಾದ ತಂದೆ ಪುಂಡಲೀಕ ಹಟ್ಟಿ (50) ಹಾಗೂ ಮಗಳು ನಿಖಿತಾ (24) ಸಾವನ್ನಪ್ಪಿದ್ದಾರೆ. ಪುಂಡಲೀಕ ಅವರು ನಿಪ್ಪಾಣಿ ಟೌನ್‌ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿದ್ದರು ಎಂದು ತಿಳಿದುಬಂದಿದೆ.

ತಂದೆ ಹಾಗೂ ಮಗಳು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ತವನಿಧಿ ಘಾಟ್‌ನ ಸ್ಪೀಡ್ ಬ್ರೇಕರ್ ಬಳಿ ಬೈಕ್ ಸ್ಲೋ ಮಾಡಿದ್ದಾರೆ. ಕೂಡಲೇ ಹಿಂದಿನಿಂದ ಬಂದು ಲಾರಿ ಗುದ್ದಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ತಂದೆ-ಮಗಳು ರಸ್ತೆ ಮೇಲೆ ಬಿದ್ದಿದ್ದು, ಅವರ ಮೇಲೆಯೇ ಲಾರಿ ಹರಿದುಕೊಂಡು ಹೋಗಿದೆ. ಪೊಲೀಸ್ ಇಲಾಖೆ ಹಾಗೂ ಸ್ಥಳೀಯರಲ್ಲಿ ಶೋಕದ ಛಾಯೆ ಮೂಡಿದ್ದು, ನಿಪ್ಪಾಣಿ ಶಹರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *