Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪತ್ರಕರ್ತೆ ಮೇಲೆ ರಾಹುಲ್ ಗಾಂಧಿ ಹ*ಲ್ಲೆ ಆರೋಪ: ದೆಹಲಿಯಲ್ಲಿ ರಾಜಕೀಯ ಕೋಲಾಹಲ!

Spread the love

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ದೂರು ನೀಡುವ ಸಮಯದಲ್ಲಿ ರಾಹುಲ್ ಗಾಂಧಿ (Ragul Gandhi) ತಮ್ಮ ಕೈಯನ್ನು ಬಲವಂತವಾಗಿ ಎಳೆದು ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಪತ್ರಕರ್ತೆ ರಿಚಾ ಪರಾಶರ್ ಹಲ್ಲೆಗೊಳಗಾದ ಆರೋಪ ಹೊರಿಸಿದ್ದು, ಪ್ರಸ್ತುತ ರಾಜಧಾನಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.ಆಸ್ಪತ್ರೆಯ ಬೆಡ್ ಮೇಲೆ ಮಲಗಿಯೇ ಮಾಧ್ಯಮಗಳಿಗೆ ಘಟನೆಯ ವಿವರಣೆ ನೀಡಿದ ರಿಚಾ, “ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ ನಾನು ಸುಪ್ರೀಂ ಕೋರ್ಟ್ ಗೇಟ್ ಬಳಿ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ (ಬೈಟ್) ಪಡೆಯಲು ಮೈಕ್ ಹಿಡಿದು ಕಾಯುತ್ತಿದ್ದೆ. ಅವರು ಮೈಕ್ ಸರಿಸಲು ಸೂಚಿಸಿದಾಗ ನಾನು ಹಿಂದೆ ಸರಿದೆ. ಆದರೆ ಉಳಿದ ಮಾಧ್ಯಮದವರು ಮೈಕ್ ಮುಂದೆ ಹಿಡಿದ ಕಾರಣ ಕರ್ತವ್ಯದ ಭಾಗವಾಗಿ ನಾನೂ ಮತ್ತೆ ಮೈಕ್ ಮುಂದೆ ಮಾಡಿದೆ. ಆ ವೇಳೆ ಕುಪಿತಗೊಂಡ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ನನ್ನ ಕೈಯನ್ನು ಬಲವಾಗಿ ಹಿಡಿದು ಎಳೆದರು. ನಂತರ ಅವರ ಅಂಗರಕ್ಷಕರು ನನ್ನನ್ನು ತಳ್ಳಿದರು. ಗದ್ದಲದಲ್ಲಿ ನಾನು ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದೆ, ನನ್ನ ಮೊಣಕಾಲು ಮತ್ತು ಹೊಟ್ಟೆಯ ಭಾಗ ಬಲವಾಗಿ ನೆಲಕ್ಕೆ ಬಡಿಯಿತು. ನನ್ನ ಕ್ಯಾಮೆರಾಮನ್ ಹಾಗೂ ಇತರ 4-5 ಮಂದಿ ಕೂಡ ನನ್ನ ಮೇಲೆಯೇ ಬಿದ್ದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.ಕಾಂಗ್ರೆಸ್‌ ತಿರುಗೇಟು:

ಈ ಆರೋಪಗಳನ್ನು ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಸಾಮಾಜಿಕ ಜಾಲತಾಣ ‘X’ ಮೂಲಕ ತಳ್ಳಿಹಾಕಿದ್ದು, ಇಡೀ ಘಟನೆಯನ್ನು ಬಿಜೆಪಿಯ ಕೃತ್ಯ ಎಂದು ಕರೆದಿದ್ದಾರೆಗರ್ಭಾವಸ್ಥೆಯಲ್ಲಿದ್ದಾಗ ಪ್ರತಿಭಟನೆಯಲ್ಲಿ ಭಾಗವಹಿಸುವುದು ಅಪಾಯಕಾರಿ. ರಾಹುಲ್ ಗಾಂಧಿ ಮಧ್ಯಾಹ್ನ 3-4 ಗಂಟೆಗೆ ತಳ್ಳಿದರು ಎನ್ನುತ್ತಾರೆ. ಆದರೆ ರಾತ್ರಿ 8.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಹೋದರಿ ಬಿಜೆಪಿ ಶಾಸಕರ ಕಚೇರಿಗೆ ಹೋಗಿ ಷಡ್ಯಂತ್ರ ರೂಪಿಸಿದ್ದಾರೆ. ಸಾಮಾನ್ಯವಾಗಿ ಗರ್ಭಿಣಿಯರಿಗೆ ಎಕ್ಸ್‌-ರೇ ಮಾಡುವುದಿಲ್ಲ, ಆದರೂ ಇವರಿಗೆ ಎಕ್ಸ್‌-ರೇ ಮಾಡಲಾಗಿದೆ ಎಂದು ಲಂಬಾ ಘಟನೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಘಟನೆಯ ವಿಡಿಯೋಗಳನ್ನು ಹಂಚಿಕೊಂಡಿದ್ದು, ಮಾಧ್ಯಮಗಳ ನೂಕುನುಗ್ಗಲು ಇತ್ತೇ ವಿನಃ ರಾಹುಲ್ ಗಾಂಧಿ ಪತ್ರಕರ್ತೆಯ ಮೇಲೆ ಕೈಮಾಡಿದ ಯಾವುದೇ ದೃಶ್ಯಗಳೂ ವಿಡಿಯೋದಲ್ಲಿ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಪ್ರಕರಣ ದೆಹಲಿ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *