ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಸಿದ್ಧ ಇನ್ಫ್ಲುಯೆನ್ಸರ್ ನಿಶಾ ರಾಫೆಲ್ ವಿರುದ್ಧ ಪೋಕ್ಸೋ ಕೇಸ್!

ತ್ರಿಶೂರ್ : 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪ್ರಸಿದ್ಧ ಸಾಮಾಜಿಕ ಜಾಲತಾಣ ಪ್ರಭಾವಿ (Social Media Influencer) ನಿಶಾ ರಾಫೆಲ್ ವಿರುದ್ಧ ಕೇರಳದ ತ್ರಿಶೂರ್ ಪಶ್ಚಿಮ ಠಾಣೆ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಂತ್ರಸ್ತ ಬಾಲಕನನ್ನು ತ್ರಿಶೂರ್ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ-ಕಾನೂನು ಪರೀಕ್ಷೆಗೆ (Medico-Legal Examination) ಒಳಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.ಸಾಲು ಸಾಲು ಹಿಟ್ ಸಿನಿಮಾ ಬೆನ್ನಲ್ಲೇ ಬಾನತ್ತರಕ್ಕೇರಿದ ಮಮಿತಾ ಬೈಜು ಸಂಭಾವನೆ!
ಮತ್ತೊಂದೆಡೆ, ನಿಶಾ ರಾಫೆಲ್ ಅವರ ಆಪ್ತ ಮೂಲಗಳು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ನಕಲಿ ಹಾಗೂ ಕಟ್ಟುಕಥೆಯ ಪ್ರಕರಣ ಎಂದು ಪ್ರತಿಪಾದಿಸಿವೆ. ಎರಡು ಫ್ಲಾಟ್ಗಳ ಆಸ್ತಿಗೆ ಸಂಬಂಧಿಸಿದಂತೆ ನಿಶಾ ಹಾಗೂ ದೂರುದಾರರ ಕುಟುಂಬದ ನಡುವೆ ದೀರ್ಘಕಾಲದಿಂದ ಕಾನೂನು ಸಂಘರ್ಷ ಮತ್ತು ವೈಯಕ್ತಿಕ ದ್ವೇಷವಿತ್ತು. ಅದೇ ಹಳೆಯ ಹತಾಶೆಯಿಂದ ಈ ರೀತಿಯ ಸುಳ್ಳು ದೂರು ನೀಡಲಾಗಿದೆ ಎಂದು ನಿಶಾ ಪರ ವಾದಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತ್ರಿಶೂರ್ ಪಶ್ಚಿಮ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸತ್ಯಾಸತ್ಯತೆ ಪತ್ತೆಹಚ್ಚಲು ಮುಂದಾಗಿದ್ದಾರೆ.
