Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಡಬ: ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಯುವಕ ದಿಢೀರ್ ಹೃದಯಾಘಾತದಿಂದ ದಾರುಣ ಸಾ*ವು!

Spread the love

ಆಲಂಕಾರು (ಕಡಬ) : ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮಲಗಿದ್ದ ಯುವಕನೊಬ್ಬ ದಿಢೀರ್ ಹೃದಯಾಘಾತಕ್ಕೊಳಗಾಗಿ (Heart Attack) ಕೊನೆಯುಸಿರೆಳೆದಿರುವ ದುರಂತ ಘಟನೆ ಕಡಬ ತಾಲೂಕಿನ ಆಲಂಕಾರು ಸಮೀಪದ ಕಾಜರುಕ್ಕುವಿನಲ್ಲಿ ಸೆಪ್ಟೆಂಬರ್ 22 ರಂದು ನಡೆದಿದೆ. ಕಾಜರುಕ್ಕು ನಿವಾಸಿ ಸಚಿನ್ (33) ಮೃತಪಟ್ಟ ಯುವಕ

ಸಚಿನ್ ಅವರು ಆರಂಭದಲ್ಲಿ ಕಾಜರುಕ್ಕುವಿನಲ್ಲಿ ಸ್ವಂತ ಬೈಕ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದರು. ಅದನ್ನು ಬಿಟ್ಟು ಕಳೆದ ಒಂದೂವರೆ ವರ್ಷಗಳಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (KSCDC) ಮಂಗಳೂರು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ವೀಕ್ಷಕರಾಗಿ (Forest Watcher) ಕರ್ತವ್ಯ ನಿರ್ವಹಿಸುತ್ತಿದ್ದರು.

ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಸೇವೆಯಿಂದ ಮನೆಗೆ ಬಂದಿದ್ದ ಸಚಿನ್, ಊಟ ಮಾಡಿ ವಿಶ್ರಾಂತಿಗಾಗಿ ಮಲಗಿದ್ದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಾಯಿ ಅವರನ್ನು ಎಬ್ಬಿಸಲು ಹೋದಾಗ, ಸಚಿನ್ ಅವರು ಜೋರಾಗಿ ಉಸಿರಾಟ ನಡೆಸುತ್ತಾ ಹಾಸಿಗೆಯಲ್ಲಿ ಹೊರಳಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆತಂಕಗೊಂಡ ತಾಯಿ ತಮ್ಮ ಮತ್ತೊಬ್ಬ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಮನೆಗೆ ಓಡೋಡಿ ಬಂದ ಸಹೋದರ, ಸ್ನೇಹಿತನ ಕಾರಿನಲ್ಲಿ ಸಚಿನ್ ಅವರನ್ನು ಚಿಕಿತ್ಸೆಗಾಗಿ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯಾಧಿಕಾರಿಗಳು ಸಚಿನ್ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *