Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸದಿಲ್ಲಿ: ನೀಲಿ ಕಿಟ್ ಘೋಷಣೆಯ ಹೊರತಾಗಿಯೂ ಏಷ್ಯನ್ ಗೇಮ್ಸ್‌ನಲ್ಲಿ ಕೇಸರಿ ಜರ್ಸಿ ಧರಿಸಿ ಕಣಕ್ಕಿಳಿದ ಭಾರತೀಯ ಹಾಕಿ ತಂಡಗಳು!

Spread the love

ಹೊಸದಿಲ್ಲಿ: ಭಾರತದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಇನ್ನು ಮುಂದೆ ಸಾಂಪ್ರದಾಯಿಕ ನೀಲಿ ಕಿಟ್‌ಗಳನ್ನು ಧರಿಸಲಿವೆ ಎಂದು ಹಾಕಿ ಇಂಡಿಯಾ ಘೋಷಿಸಿದ ಹೊರತಾಗಿಯೂ ರವಿವಾರ ಏಶ್ಯನ್ ಗೇಮ್ಸ್‌ನ ಆರಂಭಿಕ ಪಂದ್ಯಗಳಲ್ಲಿ ಉಭಯ ತಂಡಗಳು ಕೇಸರಿ ಬಣ್ಣದ ಜರ್ಸಿ ಧರಿಸಿ ಆಡಿದವು.
ಎರಡೂ ತಂಡಗಳು ಜಪಾನ್‌ನಲ್ಲಿ ರವಿವಾರ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಇಂಡೋನೇಶ್ಯ ಹಾಗೂ ಉಲ್ಲೇಕಿಸ್ತಾನದ ವಿರುದ್ಧದ ಮೊದಲ ಪಂದ್ಯಗಳಲ್ಲಿ ಕೇಸರಿ ಬಣ್ಣದ ಜರ್ಸಿ ಧರಿಸಿ ಆಡಿವೆ.
ಬೆಲ್ಲಿಯಮ್ ಹಾಗೂ ನದರ್‌ಲ್ಯಾಂಡ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ವಿಶ್ವಕಪ್ ನಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳು ಕೇಸರಿ ಬಣ್ಣದ ಜರ್ಸಿ ಧರಿಸಿದ್ದವು. ಈ ನಿರ್ಧಾರದ ಮೂಲಕ ಹಾಕಿ ಇಂಡಿಯಾವು ವಿವಾದಕ್ಕೆ ಸಿಲುಕಿತ್ತು.

1928ರಲ್ಲಿ ದೇಶವು ಒಲಿಂಪಿಕ್ಸ್‌ನಲ್ಲಿ ಪಾದಾರ್ಪಣೆಗೈದ ನಂತರ ಭಾರತೀಯ ಹಾಕಿ ತಂಡಗಳು ಕೆಲವೊಂದು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಬಹುತೇಕ ಸಂದರ್ಭದಲ್ಲಿ ನೀಲಿ ಬಣ್ಣದ ಜರ್ಸಿಗಳನ್ನೇ ಧರಿಸುತ್ತಾ ಬಂದಿದೆ.
ಒಕ್ಕೂಟದ ನಾಯಕರು ಹಾಗೂ ಕಾರ್ಯಕಾರಿ ಮಂಡಳಿಯ ಗಮನಕ್ಕೆ ತರದೆ ಜರ್ಸಿಯ ಬಣ್ಣ ಬದಲಿಸುವ ನಿರ್ಧಾರಕ್ಕೆ ಬರಲಾಗಿತ್ತು ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲಿಪ್ ಟಿರ್ಕಿ ಈ ಹಿಂದೆ ಟೀಕಿಸಿದ್ದರು. ‘ಏಶ್ಯನ್ ಗೇಮ್ಸ್‌ನಲ್ಲಿ ಭಾರತೀಯ ತಂಡಕ್ಕೆ ನೀಲಿ ಬಣ್ಣದ ಜರ್ಸಿ ಮೊದಲ ಆಯ್ಕೆಯಾಗಿದೆ. ಕೇಸರಿ ಬಣ್ಣ ಎರಡನೇ ಆಯ್ಕೆಯಾಗಿದೆ” ಎಂದು ಹಾಕಿ ತಂಡವನ್ನು ಗೇಮ್ಸ್‌ಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಟಿರ್ಕಿ ಘೋಷಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *