Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವ ಆಟಗಾರರ ಮೈದಾನದ ವರ್ತನೆ: ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ವಿರುದ್ಧ ಕಠಿಣ ಕ್ರಮಕ್ಕೆ ಸಂಜಯ್ ಮಂಜ್ರೇಕರ್ ಒತ್ತಾಯ!

Spread the love

ಹೊಸದಿಲ್ಲಿ: ಭಾರತೀಯ ಯುವ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು BCCI ಹಾಗೂ ICCಗೆ ಸಂಜಯ್ ಮಂಬ್ರೇಕರ್ ಬುಧವಾರ ಒತ್ತಾಯಿಸಿದರು.
ಸೂರ್ಯವಂಶಿ ಹಾಗೂ ಜೈಸ್ವಾಲ್ ಇಬ್ಬರೂ ಇತ್ತೀಚೆಗೆ ಎರಡು ವಿಭಿನ್ನ ಸರಣಿಗಳಲ್ಲಿ ಎದುರಾಳಿ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಸುದ್ದಿಯಲ್ಲಿದ್ದಾರೆ.
ಭಾರತ ಎ ತಂಡ ಇತ್ತೀಚೆಗೆ ಶ್ರೀಲಂಕಾದಲ್ಲಿ ತ್ರಿಕೋನ ಸರಣಿಯಲ್ಲಿ ಭಾಗವಹಿಸಿದ್ದಾಗ 15ರ ವಯಸ್ಸಿನ ಸೂರ್ಯವಂಶಿ ಅವರು ವಿಶೆನ್ ಹಲಂಬಾರೊಂದಿಗೆ ವಾಗ್ವಾದ ನಡೆಸಿದ್ದರು. ಔಟಾದ ನಂತರ ಲಂಕಾ ಕ್ರಿಕೆಟಿಗನನ್ನು ತಳ್ಳಿದ್ದರು.
ಈಗ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ವೇಳೆ ಜೈಸ್ವಾಲ್ ಅವರು ಅಸಿತಾ ಫೆರ್ನಾಂಡೊರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು.
ಸೂರ್ಯವಂಶಿ ಹಾಗೂ ಹಲಂಬಾಗೆ ಪಂದ್ಯ ಶುಲ್ಕದ ಶೇ. 50ರಷ್ಟು ದಂಡ ವಿಧಿಸಿದ್ದರೆ, ಜೈಸ್ವಾಲ್ ಹಾಗೂ ಫೆರ್ನಾಂಡೊಗೆ ಪಂದ್ಯ ಶುಲ್ಕದಲ್ಲಿ ಶೇ. 25ರಷ್ಟು ದಂಡ ವಿಧಿಸಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *