Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಫ್‌ಐಎಚ್ ಮಹಿಳೆಯರ ವಿಶ್ವಕಪ್: 5ನೇ ಸ್ಥಾನಕ್ಕಾಗಿ ಜರ್ಮನಿ ವಿರುದ್ಧ ಸೆಣಸಾಡಲಿರುವ ಭಾರತ!

Spread the love

ಆ್ಯಮ್ಮೆಲ್ವಿನ್: ಆಸ್ಟ್ರೇಲಿಯ ತಂಡದ ವಿರುದ್ಧ ಗೋಲುರಹಿತ ಡ್ರಾಗೊಳಿಸಿದ ನಂತರ ತನ್ನ ಸೆಮಿ ಫೈನಲ್ ಆಸೆ ಕೈಬಿಟ್ಟಿದ್ದ ಭಾರತ ತಂಡವು ಎಫ್‌ಐಎಚ್ ಮಹಿಳೆಯರ ವಿಶ್ವಕಪ್ನಲ್ಲಿ ಗುರುವಾರ ಐದನೇ-ಆರನೇ ಸ್ಥಾನಕ್ಕಾಗಿ ನಡೆಯುವ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಐದನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.
ಭಾರತದ ಮಹಿಳಾ ತಂಡವು 1974ರ ವಿಶ್ವಕಪ್ ನಂತರ ನಾಲ್ಕನೇ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮಾಡುವ ಭರವಸೆ ಮೂಡಿಸಿತ್ತು. ಆದರೆ ಆಸ್ಟ್ರೇಲಿಯದ ವಿರುದ್ಧ ಗೋಲು ಗಳಿಸದ ಕಾರಣ ಈ ಕನಸು ಕೈಗೂಡಲಿಲ್ಲ.

ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ನತ್ತ ಭಾರತ ತಂಡ ತನ್ನ ಗಮನ ಹರಿಸಲಿದ್ದು, ಗೇಮ್ನಲ್ಲಿ ಚಿನ್ನದ ಪದಕ ಜಯಿಸಿದರೆ, 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ ನೇರ ಅರ್ಹತೆ ಪಡೆಯುವುದು ಖಚಿತವಾಗಲಿದೆ.
ಭಾರತ ತಂಡವು ಹಿಂದಿನ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಆ್ಯಮ್ಮೆಲ್ವಿನ್ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಸೋಲನುಭವಿಸಿ, ಗರಿಷ್ಠ ರ್ಯಾಂ ಕಿನ ಚೀನಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ವಿರುದ್ಧ ಡ್ರಾ ಸಾಧಿಸಿರುವ ಹೊರತಾಗಿಯೂ ಭಾರತ ತಂಡವು ಗೋಲುಗಳ ಬರ ಎದುರಿಸಿರುವುದು ಚಿಂತೆಯ ವಿಚಾರವಾಗಿದೆ.
ದೀಪಿಕಾ ಹಾಗೂ ನವನೀತ್ ಕೌರ್ ತಲಾ ಎರಡು ಗೋಲು ಗಳಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *