Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುಎಸ್ ಓಪನ್: ಸೆರೆನಾ ವಿಲಿಯಮ್ಸ್ ಹಾಗೂ ಕಾರ್ಲೊಸ್ ಅಲ್ಕರಾಝ್ ಜೋಡಿಗೆ ಆಘಾತಕಾರಿ ಸೋಲು!

Spread the love

ನ್ಯೂಯಾರ್ಕ್: ಯುಎಸ್ ಓಪನ್ನ ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಬೆಲಿಂಡಾ ಬೆನ್ಸಿಕ್ ಹಾಗೂ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಸೋತಿರುವ ಸೆರೆನಾ ವಿಲಿಯಮ್ಸ್ ಹಾಗೂ ಕಾರ್ಲೊಸ್ ಅಲ್ಕರಾಝ್ ಟೂರ್ನಿಯಿಂದ ಹೊರಗುಳಿದರು.
ವಿಲಿಯಮ್ಸ್ ಹಾಗೂ ಅಲ್ಕರಾಝ್ ಅವರು ಬೆನ್ಸಿಕ್ ಹಾಗೂ ಕೊಬೊಲ್ಲಿ ವಿರುದ್ಧ 5-4(4), 4-1 ಸೆಟ್ ಗಳ ಅಂತರದಿಂದ ಸೋತಿದ್ದಾರೆ.
ಬೆನ್ಸಿಕ್ ಹಾಗೂ ಕೊಬೊಲ್ಲಿ ಸೆಮಿ ಫೈನಲ್ ಸುತ್ತಿನಲ್ಲಿ ಎಲಿನಾ ಸ್ವಿಟೋಲಿನಾ ಹಾಗೂ ಮೊನ್ಸಿಲ್ಸ್ ರನ್ನು ಎದುರಿಸಲಿದ್ದಾರೆ.
ಕಟೆರಿನಾ ಸಿನಿಯಕೋವಾ ಹಾಗೂ ಹೆನ್ರಿ ಪ್ಯಾಟೆನ್ ರನ್ನು 5-4(6), 4-5(3), 10-8 ಅಂತರದಿಂದ ಮಣಿಸಿದ ಬೆನ್ಸಿಕ್ ಹಾಗೂ ಕೊಬೊಲ್ಲಿ ಅಂತಿಮ-4ರ ಘಟ್ಟ ತಲುಪಿದ ಮೊದಲ ಜೋಡಿ ಎನಿಸಿಕೊಂಡಿತು.

‘ಮೊದಲ ಸುತ್ತಿನಲ್ಲಿ ಮುಗ್ಗರಿಸಿದ ಸಬಲೆಂಕಾ, ಜೊಕೊವಿಕ್
ಆರ್ಯನಾ ಸಬಲೆಂಕಾ ಹಾಗೂ ನೊವಾಕ್ ಜೊಕೊವಿಕ್ ಅವರ ಯುಎಸ್ ಓಪನ್ ಮಿಕ್ಸೆಡ್ ಡಬಲ್ಸ್ ಅಭಿಯಾನವು ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿದೆ.
ಅಗ್ರ ಶ್ರೇಯಾಂಕದ ಜೋಡಿ ಮಂಗಳವಾರ ನಡೆದ ಪಂದ್ಯದಲ್ಲಿ ಡಬಲ್ ಸ್ಪೆಷಲಿಸ್ಟಳಾದ ಕಟೆರಿನಾ ಸಿನಿಯಕೋವಾ ಹಾಗೂ ಹೆನ್ರಿ ಪ್ಯಾಟೆನ್ ವಿರುದ್ಧ 1-4, 4-2(10-2) ಸೆಟ್ ಗಳ ಅಂತರದಿಂದ ಸೋತಿದೆ.
ಈ ಸೋಲಿನ ಹಿನ್ನೆಲೆಯಲ್ಲಿ ಸಬಲೆಂಕಾ ಹಾಗೂ ಜೊಕೊವಿಕ್ ಇದೀಗ ಟೂರ್ನಮೆಂಟ್ ನಲ್ಲಿ ತಮ್ಮ ಸಿಂಗಲ್ಸ್ ಅಭಿಯಾನದತ್ತ ಸಂಪೂರ್ಣ ಗಮನ ಹರಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ಆಟಗಾರರನ್ನು ಸೆಳೆಯುವ ಉದ್ದೇಶದಿಂದ ಕಳೆದ ವರ್ಷ 16 ತಂಡಗಳ ಮಿಕ್ಸೆಡ್ ಡಬಲ್ಸ್ ಸ್ಪರ್ಧಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಸಿಂಗಲ್ಸ್ ವಿಭಾಗದ ಪ್ರಮುಖ ಸುತ್ತು ಆರಂಭವಾಗುವ ಎರಡು ದಿನಗಳ ಮೊದಲು ಮಿಶ್ರ ಡಬಲ್ಸ್ ಟೂರ್ನಿ ಆರಂಭವಾಗಿದೆ. ಇದರಲ್ಲಿ ವೇಗದ ಸ್ಟೋರಿಂಗ್ ಮಾದರಿಯನ್ನು ಬಳಸಲಾಗುತ್ತಿದೆ.
ಎರಡು ಬಾರಿಯ ಹಾಲಿ ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಸಬಲೆಂಕಾ ಹಾಗೂ 24 ಬಾರಿಯ ಗ್ಯಾನ್ಸಾಮ್ ವಿನ್ನರ್ ಜೊಕೊವಿಕ್ ಸಿಂಗಲ್ಸ್ ರ್ಯಾಂಕಿಂಗ್ ಆಧರಿಸಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *