Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫಿಫಾ ವಿಶ್ವಕಪ್: ಎಂಬಾಪೆ ವಿರುದ್ಧ ಅಜೇಯ ಓಟ ಮುಂದುವರಿಸಿದ ಯುವ ತಾರೆ ಲಾಮಿನ್ ಯಮಲ್!

Spread the love

ಡಲ್ಲಾಸ್: ಕೈಲಿಯನ್ ಎಂಬಾಪೆ ವಿರುದ್ಧ ನಾಕೌಟ್ ಪಂದ್ಯಗಳಲ್ಲಿ ತನ್ನ ಗಮನಾರ್ಹ ಪ್ರದರ್ಶನವನ್ನು ಲಾಮಿನ್ ಯಮಲ್ 2026ರ ಫಿಫಾ ವಿಶ್ವಕಪ್‌ನಲ್ಲೂ ಮುಂದುವರಿಸಿದ್ದಾರೆ. ಫ್ರಾನ್ಸ್ ಎದುರಿನ ಸೆಮಿಫೈನಲ್ ಪಂದ್ಯವನ್ನು 2-0 ಅಂತರದಿಂದ ಗೆದ್ದಿರುವ ಸ್ಪೇನ್ ತಂಡವು ಫೈನಲ್ ನಲ್ಲಿ ಸ್ಥಾನ ಪಡೆದಿದೆ.
ಈ ಗೆಲುವಿನ ಮೂಲಕ ಯಮಲ್ ಅವರು ಫ್ರಾನ್ಸ್‌ನ ಸೂಪರ್‌ಸ್ವಾರ್ ಎಂಬಾಪೆ ವಿರುದ್ಧ ಕ್ಲಬ್ ಹಾಗೂ ಅಂತರ್‌ರಾಷ್ಟ್ರೀಯ ಫುಟ್ಬಾಲ್ ನ ನಾಕೌಟ್ ಪಂದ್ಯಗಳಲ್ಲಿನ ಅಜೇಯ ದಾಖಲೆಯನ್ನು ವಿಸ್ತರಿಸಿದ್ದಾರೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಎಂಬಾಪೆ ಅಗ್ರ ಗೋಲು ಸ್ಕೋರರ್‌ಗಳ ಪೈಕಿ ಒಬ್ಬರಾಗಿದ್ದರೂ, ತನ್ನ ಚೊಚ್ಚಲ ವಿಶ್ವಕಪ್ ಆಡುತ್ತಿರುವ ಸ್ಪೇನ್‌ನ ಯುವ ಆಟಗಾರ ಯಮಲ್ ನಾಕೌಟ್ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಎಂಬಾಪೆ ವೈಯಕ್ತಿಕ ಪ್ರದರ್ಶನದಲ್ಲಿ ಮೇಲುಗೈ ಸಾಧಿಸಿದ್ದರೆ, ಎಲಿಮಿನೇಷನ್ ಪಂದ್ಯಗಳಲ್ಲಿ ಯಮಲ್ ಅವರು ಎಂಬಾಪೆ ವಿರುದ್ಧ 6-0 ದಾಖಲೆ ಹೊಂದಿದ್ದಾರೆ.
ಎಂಬಾಪೆ ಅವರು ಯಮಲ್ ವಿರುದ್ಧ ಕ್ಲಬ್ ಅಥವಾ ದೇಶದ ಪರ ಆಡಿರುವ ಪ್ರತಿಯೊಂದು ನಾಕೌಟ್ ಪಂದ್ಯದಲ್ಲೂ ಸೋತಿದ್ದಾರೆ. ಆ ಪಂದ್ಯಗಳೆಂದರೆ:

  • ಫ್ರಾನ್ಸ್ ವಿರುದ್ಧ ಸ್ಪೇನ್‌ಗೆ 2-1 ಗೆಲುವು (ಯುರೋ 2024)
    ರಿಯಲ್ ಮ್ಯಾಡ್ರಿಡ್ ವಿರುದ್ಧ ಬಾರ್ಸಿಲೋನಕ್ಕೆ 5-2 ಗೆಲುವು (2025ರ ಸೂಪರ್‌ಕೊಪಾ ಫೈನಲ್
    ರಿಯಲ್ ಮ್ಯಾಡ್ರಿಡ್ ವಿರುದ್ಧ ಬಾರ್ಸಿಲೋನಕ್ಕೆ 3-2 ಗೆಲುವು (2025ರ ಕೋಪಾ ಡೆಲ್ ರೆ ಫೈನಲ್
  • ಫ್ರಾನ್ಸ್ ವಿರುದ್ಧ ಸ್ಪೇನ್‌ಗೆ 5-4 ಗೆಲುವು (2025ರ ಯುಇಎಫ್‌ಎ ನೇಶನ್ಸ್ ಲೀಗ್
    ರಿಯಲ್ ಮ್ಯಾಡ್ರಿಡ್ ವಿರುದ್ಧ ಬಾರ್ಸಿಲೋನಕ್ಕೆ 3-2 ಗೆಲುವು (2026ರ ಸೂಪರ್‌ಕೊಪಾ ಫೈನಲ್
    ಫ್ರಾನ್ಸ್ ವಿರುದ್ಧ ಸ್ಪೇನ್‌ಗೆ 2-0 ಗೆಲುವು (ಫಿಫಾ ವಿಶ್ವಕಪ್-2026 ಸೆಮಿಫೈನಲ್

Spread the love
Share:

administrator

Leave a Reply

Your email address will not be published. Required fields are marked *