ಫಿಫಾ ವಿಶ್ವಕಪ್: ಫ್ರಾನ್ಸ್ ಮಣಿಸಿ ಫೈನಲ್ಗೆ ಲಗ್ಗೆಯಿಟ್ಟ ಸ್ಪೇನ್; ಇಟಲಿಯ ದಾಖಲೆ ಸರಿಗಟ್ಟಿದ ‘ರೆಡ್ ಫ್ಯೂರಿ’!

ಡಲ್ಲಾಸ್: ಫ್ರಾನ್ಸ್ ವಿರುದ್ಧ ಬುಧವಾರ ನಡೆದ ಫಿಫಾ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಶಾಲಿಯಾದ ಸ್ಪೇನ್ ತಂಡವು ಅಂತರ್ರಾಷ್ಟ್ರೀಯ ಫುಟ್ಬಾಲ್ ನಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.
ಈ ಗೆಲುವಿನ ಮೂಲಕ ಸ್ಪೇನ್ ತಂಡವು ಅಂತರ್ರಾಷ್ಟ್ರೀಯ ಫುಟ್ಬಾಲ್ ನಲ್ಲಿ ಸತತ ಗೆಲುವಿನ ಓಟವನ್ನು 37 ಪಂದ್ಯಗಳಿಗೆ ವಿಸ್ತರಿಸಿದೆ. ಈ ಮೂಲಕ ಇಟಲಿ ತಂಡದ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದೆ.
ಮೈಕಲ್ ಒಯರ್ಝಾಬಲ್ ಹಾಗೂ ಪೆಟ್ರೊ ಪೊರ್ರೊ ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ 2010ರ ಚಾಂಪಿಯನ್ ಸ್ಪೇನ್ ತಂಡವು 2018ರ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ರವಿವಾರ ರಾತ್ರಿ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.ಅಂತರ್ರಾಷ್ಟ್ರೀಯ ಫುಟ್ಬಾಲ್ ನಲ್ಲಿ ಸುದೀರ್ಘ ಅಜೇಯ ಓಟ
