ಹೊಸದಿಲ್ಲಿ: ನೀಟ್ ಪರೀಕ್ಷೆಗಾಗಿ ನಿಷೇಧ; ಭಾರತ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಟೆಲಿಗ್ರಾಮ್ ಭೀಕರ ಟ್ರೋಲ್ ವಾರ್!

ಹೊಸದಿಲ್ಲಿ: NEET-UG ಮರುಪರೀಕ್ಷೆಗೆ ಮುನ್ನ ಕೇಂದ್ರ ಸರಕಾರ ಟೆಲಿಗ್ರಾಂ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಸರಕಾರದ ಕ್ರಮವನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡುತ್ತಿರುವುದು, ಟ್ರೋಲ್ ಮಾಡುತ್ತಿರುವುದು ಕಂಡು ಬಂದಿದೆ.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಟೆಲಿಗ್ರಾಮ್ ಅನ್ನು ನಿರ್ಬಂಧಿಸುವುದೇ ಮಾಸ್ಟರ್ಸ್ಟೋಕ್ ಆಗಿದೆಯೇ?” ಎಂದು ಪೋಸ್ಟ್ ಮಾಡಿದ್ದರು.
