ನ.17ರಂದು ಕದ್ರಿ ಮೈದಾನದಲ್ಲಿ ವೀರ ಸಂತರ ಸ್ಮೃತಿ ದಿವಸ್ ಹಾಗೂ ಸಾರ್ವಜನಿಕ ಗೋಪೂಜೆ: ದ ಸಾಫ್ರಾನ್ ಫ್ರಂಟ್ ಆಯೋಜನೆ

ಮಂಗಳೂರುದ ಸಾಫ್ರಾನ್ ಫ್ರಂಟ್ ನೇತೃತ್ವದಲ್ಲಿ ‘ಜಾಗೃತ ಸಂತ- ಉದ್ಧೃತ ಭಾರತ‘ ಎಂಬ ಘೋಷ ವಾಕ್ಯದೊಂದಿಗೆ ವೀರ ಸಂತರ ‘ಸ್ಮೃತಿ ದಿವಸ್‘ ಆಚರಣೆ ಹಾಗೂ ಗೋಪಾಷ್ಟಮಿ ಪ್ರಯುಕ್ತ ಸಾರ್ವಜನಿಕ ಗೋಪೂಜೆ ನ.17ರಂದು ಕದ್ರಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಷ್ಟ್ರಾಧ್ಯಕ್ಷ ರಾಜೇಶ್ ಪವಿತ್ರನ್ 1966ರ ನ.6ರಂದು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಹೊಸ ದಿಲ್ಲಿಯ ಸಂಸತ್ ಭವನದ ಎದುರು ಗೋಪಾಷ್ಟಮಿಯ ಪುಣ್ಯದಿನದಂದು ಧರ್ಮ ಸಾಮ್ರಾಟ್ ಸ್ವಾಮಿ ಶ್ರೀ ಕರಪಾತ್ರಿ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಚಳುವಳಿಯಲ್ಲಿ ಲಕ್ಷಾಂತರ ಸಂತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾವಿವಾರು ಸಂಖ್ಯೆಯಲ್ಲಿ ಸಾಧು ಸಂತರ ಮಾರಣ ಹೋಮ ನಡೆದಿದ್ದು, ಇತಿಹಾಸದಲ್ಲಿ ಹುದುಗಿ ಹೋಗಿರುವ ಕರಾಳ ಸತ್ಯವಾಗಿದೆ. ಘಟನೆ ನಡೆದು 60 ವರ್ಷ ಕಳೆದರೂ ಇನ್ನೂ ಬೇಡಿಕೆ ಈಡೇರದಿರುವುದು ದುರಾದೃಷ್ಟದ ಸಂಗತಿ. ಸಂತರ ಬಲಿದಾನವನ್ನು ನೆನಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರುಸಂಘಟನೆಯ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ಗುರೂಜಿ, ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಡಾ| ಎಲ್.ಕೆ. ಸುವರ್ಣ, ಜಾರ್ಜ್ ಫೆರ್ನಾಂಡಿಸ್ ಸೋಶಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮುನಿರತ್ನ, ಸಾಫ್ರಾನ್ ಫ್ರಂಟ್ ಯುವ ಘಟಕದ ಅಧ್ಯಕ್ಷ ವರ್ಣಿತ್ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ತುಷಾರ್ ಕದ್ರಿ ಉಪಸ್ಥಿತರಿದ್ದರು.
