ಹೈದರಾಬಾದ್ ರಸ್ತೆಗಳಲ್ಲಿ ರಾಹುಲ್ ಗಾಂಧಿ ಬೈಕ್ ಸವಾರಿ: ಗಿಗ್ ಕಾರ್ಮಿಕರ ಜೊತೆ ರ್ಯಾಲಿ!

ನವದೆಹಲಿ: ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೈದರಾಬಾದ್‌ನಲ್ಲಿ ಗಿಗ್ ಕಾರ್ಮಿಕರೊಂದಿಗೆ ಬೈಕ್ ರ್ಯಾಲಿಯಲ್ಲಿ ಸೇರಿಕೊಂಡರು.ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಇತರ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ರ್ಯಾಲಿಯು ಶಿಲ್ಪರಾಮಂ ಸರ್ಕಾರಿ ಸಭಾಂಗಣದಲ್ಲಿ ಪ್ರಾರಂಭವಾಗಿ ನಗರದ ಐಟಿ ಕಾರಿಡಾರ್‌ನಲ್ಲಿರುವ ಮಾಧಾಪುರದ ಜಯಭೇರಿ ಮೈದಾನದಲ್ಲಿ ಮುಕ್ತಾಯಗೊಂಡಿತು. ರ್ಯಾಲಿಯಲ್ಲಿ ರಾಹುಲ್ ಹಿಂಬದಿ ಸವಾರಿ ಮಾಡಿದರು.
ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಗಿಗ್ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಸರ್ಕಾರವು ಅವರ ಕಳವಳಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ಈಡೇರಿಸುತ್ತಿದೆ ಎಂದು ಹೇಳಿದರು.”ತೆಲಂಗಾಣದ ಗಿಗ್ ಕಾರ್ಯಕರ್ತರೊಂದಿಗೆ ನಾನು ಸಭೆ ನಡೆಸಿದ್ದೆ. ನೀವು ನಿಮ್ಮ ದುಃಖ ಮತ್ತು ನೋವನ್ನು ನನ್ನೊಂದಿಗೆ ಹಂಚಿಕೊಂಡಿದ್ದೀರಿ. ಆ ಸಮಯದಲ್ಲಿ, ಕಾಂಗ್ರೆಸ್ ಪಕ್ಷ, ನಮ್ಮ ಮುಖ್ಯಮಂತ್ರಿ ಮತ್ತು ನಾವೆಲ್ಲರೂ ನಿಮ್ಮ ಬೇಡಿಕೆಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ನಿಮಗೆ ಸಹಾಯ ಮಾಡಲು ಮತ್ತು ನಿಮ್ಮನ್ನು ರಕ್ಷಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು ಎಂದು ನಾನು ಹೇಳಿದೆ. ಇಂದು ನಾವು ಆ ಭರವಸೆಯನ್ನು ಈಡೇರಿಸುತ್ತಿದ್ದೇವೆ…”
ತೆಲಂಗಾಣ ಸರ್ಕಾರವು ಮಾರ್ಚ್‌ಲ್ಲಿ ತೆಲಂಗಾಣ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕಸ್್ರ (ನೋಂದಣಿ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2026 ಅನ್ನು ಜಾರಿಗೆ ತಂದಿತು. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಗಿಗ್ ವರ್ಕಗ್ರಳ ಕಳವಳಗಳ ಕುರಿತು ಗಾಂಧಿಯವರು ಹಿಂದೆ ಮಧ್ಯಪ್ರವೇಶಿಸಿದ ನಂತರ ಈ ಶಾಸನವನ್ನು ಜಾರಿಗೆ ತರಲಾಯಿತು .
