ಉಪ್ಪಿನಂಗಡಿ: ನಿಂತಿದ್ದ ಟಿಪ್ಪರ್ ಲಾರಿಗೆ ಕಾರು ಢಿಕ್ಕಿ; 4 ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯ!

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಲಾರಿಯ ಹಿಂಬದಿಗೆ ಕಾರೊಂದು ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 4 ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಮೈರಕಟ್ಟೆ ಎಂಬಲ್ಲಿ ಜುಲೈ 28ರಂದು ಸಂಭವಿಸಿದೆ.

ಮೂಲತಃ ಫರಂಗಿಪೇಟೆ ನಿವಾಸಿಗಳಾದ ಕಾರು ಚಾಲಕ ಮೊಹಮ್ಮದ್ ಫಾರೂಕ್ (31), ಪ್ರಯಾಣಿಕರಾದ ಫಾತಿಮತ್ ತಸ್ಪಿಯಾ (25), ಜುಲೈಕಾ (52), ಮಹಮ್ಮದ್ ಅಫ್ವಾನ್ (15) ಹಾಗೂ 4 ವರ್ಷದ ಪುಟ್ಟ ಮಗು ಮಹಮ್ಮದ್ ಇಲ್ಹಾನ್ ಗಾಯಗೊಂಡ ಪ್ರಯಾಣಿಕರು.
ಫರಂಗಿಪೇಟೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ವೇಳೆ ಪೆರ್ನೆಯ ಮೈರಕಟ್ಟೆ ಬಳಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಗೆ ಕಾರು ಹಿಂಬದಿಯಿಂದ ಬಂದು ಭೀಕರವಾಗಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು, ಒಳಗಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.