Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ಸ್ 2026: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ, ಬೆಳ್ಳಿ ಗೆದ್ದ ಹರ್ಜಿಂದರ್ ಕೌರ್!

Spread the love

ಗ್ಲಾಸ್ಕೋ: ಕಾಮನ್ವೆಲ್ತ್ ಗೇಮ್ಸ್ 2026ರ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದ್ದು, ಮಹಿಳೆಯರ 69 ಕೆಜಿ ವಿಭಾಗದಲ್ಲಿ ಹರ್ಜಿಂದರ್ ಕೌರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಸಾಧನೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.
ಅವರು ಈ ಹಿಂದಿನ 2022ರ ಬರ್ಮಿಂಗ್‌ಹ್ಯಾಮ್‌ನ ಆವೃತ್ತಿಯಲ್ಲಿ ಕಂಚು ಗೆದ್ದಿದ್ದರು.
ಹರ್ಜಿಂದರ್ ಸ್ನಾಚ್‌ನಲ್ಲಿ 101 ಕೆಜಿ ಭಾರವನ್ನು ಎತ್ತುವ ಮೂಲಕ ಆರಂಭದ ಒತ್ತಡವನ್ನು ಕಡಿಮೆಗೊಳಿಸಿದರು. ಕ್ಲೀನ್ ಅಂಡ್ ಜರ್ಕ್‌ನಲ್ಲಿ 124 ಕೆಜಿ ಎತ್ತುವ ಮೂಲಕ ಕ್ರೀಡಾಕೂಟದ ತಮ್ಮ ದಾಖಲೆಯನ್ನು ಉತ್ತಮಪಡಿಸಿದರು. ಒಟ್ಟು 227 ಕೆಜಿ ಭಾರ ಎತ್ತಿ ಬೆಳ್ಳಿ ಪದಕಕ್ಕೆ ಭಾಜನರಾದರು.
ಈ ವಿಭಾಗದಲ್ಲಿ ಕೆನಡಾದ ಚಾರ್ಲೊಟ್ ಸಿಮೋನೌ ಒಟ್ಟು 240 ಕೆಜಿ (108 ಕೆಜಿ + 132 ಕೆಜಿ) ತೂಕ ಎತ್ತುವ ಮೂಲಕ ಕಾಮನ್ವೆಲ್ತ್‌ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಆಸ್ಟ್ರೇಲಿಯಾದ ನಿಯಾ ಫೀಬ್ ಹೇಮನ್ 218 ಕೆಜಿ (97 ಕೆಜಿ + 121 ಕೆಜಿ) ಎತ್ತಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ವೇಟ್ಲಿಫ್ಟಿಂಗ್ ನಲ್ಲಿ ಭಾರತ ಈಗಾಗಲೇ 1 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಗೆದ್ದಿದೆ.


Spread the love
Share:

administrator

Leave a Reply

Your email address will not be published. Required fields are marked *