Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೀಟ್ ಬೆನ್ನಲ್ಲೇ ಯುಜಿಸಿ-ಎನ್‌ಇಟಿ ಪರೀಕ್ಷಾ ಪತ್ರಿಕೆ ಸೋರಿಕೆ ಆರೋಪ: ಎನ್‌ಟಿಎ ವಿರುದ್ಧ ತೀವ್ರ ಆಕ್ರೋಶ!

Spread the love

ಹೊಸದಿಲ್ಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ವಿವಾದ ಆರುವ ಮುನ್ನವೇ, ಯುಜಿಸಿ-ಎನ್‌ಇಟಿ ಜೂನ್ 2026ರ ಪರೀಕ್ಷೆಯಲ್ಲೂ ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಎನ್‌ಇಟಿ ಪರೀಕ್ಷೆಯ ಪತ್ರಿಕೆಗಳಲ್ಲಿ ಎದ್ದು ಕಾಣುವಂತಹ ತಪ್ಪುಗಳು ಹಾಗೂ ಮುದ್ರಣ ದೋಷಗಳ ಬಗ್ಗೆ ದೂರುಗಳು ಬಂದ ಕೆಲವೇ ವಾರಗಳಲ್ಲಿ ಈ ಆರೋಪಗಳು ಮುನ್ನೆಲೆಗೆ ಬಂದಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತೊಮ್ಮೆ ತೀವ್ರ ಪರಿಶೀಲನೆ ಹಾಗೂ ಟೀಕೆಗೆ ಒಳಗಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಯುಜಿಸಿ-ಎನ್‌ಇಟಿ ಸಮಾಜಶಾಸ್ತ್ರ ಪತ್ರಿಕೆಯ ತಯಾರಿಕೆಗೆ ಸಂಬಂಧಿಸಿದೆ ಎನ್ನಲಾದ 100 ಪುಟಗಳ ಪಿಡಿಎಫ್ ಒಂದನ್ನು ಪರೀಕ್ಷೆಗೆ ಮುನ್ನವೇ ಹಂಚಿಕೊಳ್ಳಲಾಗಿತ್ತು ಮತ್ತು ಅದರಲ್ಲಿನ ಸುಮಾರು 90 ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು. ಅದರ ಮೂಲ ಪತ್ತೆ ಹಚ್ಚುವಂತೆ ಶಿಕ್ಷಣ ಸಚಿವಾಲಯವು ಎನ್‌ಟಿಎಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಲು ಎನ್‌ಟಿಎ ಅಧಿಕಾರಿಗಳು ಕರೆ ಹಾಗೂ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಹೇಳಿದೆ.

ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಅಕ್ರಮಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಂತರ ವಿವಾದ ಮತ್ತಷ್ಟು ತಾರಕಕ್ಕೇರಿತು. ಎಕ್ಸ್‌ನಲ್ಲಿ ಸುದ್ದಿಯೊಂದನ್ನು ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಕೇವಲ ಎನ್‌ಟಿಎ ಬಳಿ ಮಾತ್ರ ಇರಬೇಕಾಗಿದ್ದ ಪ್ರಶ್ನೆ ಪತ್ರಿಕೆ ತಯಾರಿಕೆಗೆ ಸಂಬಂಧಿಸಿದ ಪಿಡಿಎಫ್ ಪರೀಕ್ಷೆಗೆ ಮುನ್ನವೇ ಬಹಿರಂಗವಾಗಿದೆ ಎಂದು ಹೇಳಿದ್ದರು.
ಬಿಹಾರ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಮತ್ತು ರಾಜಸ್ಥಾನಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು 2.25 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಇದೇ ಜಾಲವು ಮುಂಬರುವ ಸಿಎಸ್‌ಐಆರ್-ಎನ್‌ಇಟಿ, ಎಚ್‌ಟಿಇಟಿ ಮತ್ತು ಎಡಿಎ ಪರೀಕ್ಷೆಗಳ ಪತ್ರಿಕೆಗಳನ್ನೂ ಒದಗಿಸುವುದಾಗಿ ಆಮಿಷ ಒಡ್ಡಿದೆ ಎಂದು ಅವರು ಆರೋಪಿಸಿದ್ದರು.

ಯುಜಿಸಿ-ಎನ್‌ಇಟಿ ಸಮಾಜಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು, ಪ್ರಶ್ನೆ ಪತ್ರಿಕೆಯಲ್ಲಿ ಹಲವಾರು ಕಾಗುಣಿತ ತಪ್ಪುಗಳು, ಪ್ರಮುಖ ಚಿಂತಕರ ಹೆಸರುಗಳ ವಿರೂಪಗೊಳಿಸುವಿಕೆ ಮತ್ತು ಕಳಪೆ ಹಿಂದಿ ಅನುವಾದಗಳಿದ್ದವು ಎಂದು ಆರೋಪಿಸಿದ್ದರು.
ಇದು ಪ್ರಶ್ನೆ ಪತ್ರಿಕೆ ತಯಾರಿಕೆ ಮತ್ತು ಅದರ ಪರಿಶೀಲನೆಯ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುಜಿಸಿ-ಎನ್‌ಇಟಿ ಪರೀಕ್ಷೆಯನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆಯ ಅರ್ಹತೆ, ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಪಿಎಚ್‌ಡಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಎನ್‌ಟಿಎ ಸಂಸ್ಥೆಯು ನಡೆಸುತ್ತದೆ.


Spread the love
Share:

administrator

Leave a Reply

Your email address will not be published. Required fields are marked *