Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನವೆಂಬರ್ 27ರಿಂದ ಮಂಗಳೂರಿನಲ್ಲಿ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವ: ಖ್ಯಾತ ಕಲಾವಿದರಿಂದ ಸಂಗೀತ ಸುಧೆ!

Spread the love

ಮಂಗಳೂರು:ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಹಬ್ಬಕ್ಕೆ ಸಜ್ಜು

ಮಂಗಳೂರಿನಲ್ಲಿ ನವೆಂಬರ್ 27ರಿಂದ 29ರವರೆಗೆ ಮೂರು ದಿನಗಳ ಮಂಗಳೂರು ಸಂಗೀತೋತ್ಸವ–2026 ನಡೆಯಲಿದೆ.

ಸಂಗೀತ ಪರಿಷತ್, ಮಂಗಳೂರು ವತಿಯಿಂದ ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣ ಮಠದ ಸಹಯೋಗದಲ್ಲಿ ಈ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ.

ನವೆಂಬರ್ 27ರಂದು ಸಂಜೆ 5 ಗಂಟೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸಂಗೀತೋತ್ಸವ ಉದ್ಘಾಟನೆಗೊಳ್ಳಲಿದೆ. ಬಳಿಕ ಅನೀಶ್ ವಿ. ಭಟ್ ಅವರ ಗಾಯನ ಕಚೇರಿ ನಡೆಯಲಿದೆ.

ನವೆಂಬರ್ 28ರಂದು ಸಂಜೆ 5 ಗಂಟೆಗೆ ಹೈದರಾಬಾದ್‌ನ ಜಿ. ಎಸ್. ಶ್ರೀರಾಮ್ ಅವರ ಗಾಯನ ಇರಲಿದೆ.

ನವೆಂಬರ್ 29ರಂದು ಬೆಳಿಗ್ಗೆ ಡಾ. ಎಂ. ಎಸ್. ಶೀಲಾ ಅವರ ಗಾಯನ, ಮಧ್ಯಾಹ್ನ ವಿದ್ಯಾರ್ಥಿಗಳಿಂದ ‘ಮುರಳೀ ಮಾಧುರಿ’ ಗೋಷ್ಠಿ ಗಾಯನ ಹಾಗೂ ಸಂಜೆ ಜೆ. ಬಿ. ಶ್ರುತಿಸಾಗರ್ ಅವರ ವೇಣುವಾದನ ಕಚೇರಿ ನಡೆಯಲಿದೆ.

ಮೂರು ದಿನಗಳ ಈ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *