Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಥಾಣೆ: ಮನೆಯೊಳಗೆ ಸಿಸಿಟಿವಿ ಇಟ್ಟು ಪತ್ನಿ ಮೇಲೆ ಕಣ್ಗಾವಲು; ವೈದ್ಯ ಪತಿಯ ಭೀಕರ ಕಿರುಕುಳಕ್ಕೆ ನವವಿವಾಹಿತೆ ಬಲಿ!

Spread the love

ತನ್ನ ವೈದ್ಯೆ ಪತಿ ಮತ್ತು ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ 26 ವರ್ಷದ ವಿಶಾಖಾ ತಿಲ್ಕರ್ ಮುಂಬೈ ಬಳಿಯ ಥಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪತಿಯೊಂದಿಗೆ ವಾಸಿಸುತ್ತಿದ್ದ ವಿಶಾಖಾ, ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ ಕಾರಣಕ್ಕೆ ಅವರ ಅತ್ತೆ ಥಳಿಸಿದ್ದಾರೆ. ಆದರೆ ಕಿರುಕುಳ ಕೇವಲ ದೈಹಿಕವಾಗಿರಲಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ. ಅಂಬರ್ನಾಥ್‌ನಲ್ಲಿರುವ ದಂಪತಿ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳು ಇದ್ದವು ಮತ್ತು ಅವರ ಪತಿ ನಿತಿನ್ ತಿಲ್ಕರ್ ಪತ್ನಿಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದರು. ಅವರ ಗೌಪ್ಯತೆಯ ಪ್ರತಿಯೊಂದು ಅಂಶವನ್ನು ಕಸಿದುಕೊಳ್ಳುತ್ತಿದ್ದರು ಎಂದು ದೂರಿದ್ದಾರೆ.

ಏಪ್ರಿಲ್ 30 ರಂದು ದಂಪತಿ ವಿವಾಹವಾದರು. ಮದುವೆಗೆ ಮೊದಲು ಎಲ್ಲವೂ ಚೆನ್ನಾಗಿತ್ತು, ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಯಿತು. ವಿವಾಹದ ಸಮಯದಲ್ಲಿ ಅವರು ಬಯಸಿದಷ್ಟು ಉಡುಗೊರೆಗಳು ಅಥವಾ ‘ಗೌರವ’ದ ಮಟ್ಟ ಪಡೆಯದ ಕಾರಣ ಅವರ ಅತ್ತೆ ಅಸಮಾಧಾನಗೊಂಡಿದ್ದರು ಎಂದು ವಿಶಾಖಾ ಅವರ ಕುಟುಂಬ ಆರೋಪಿಸಿದೆ.

‘ಹೆತ್ತವರ ಮನೆಯಿಂದ ಆಭರಣ ಮತ್ತು ಹಣವನ್ನು ತರುವಂತೆ ಆಕೆಯ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು’ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.

‘ನಿತಿನ್ ತಿಲ್ಕರ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದ. ಅವಳು ಯಾರೊಂದಿಗಾದರೂ ಮಾತನಾಡಿದಾಗಲೆಲ್ಲ, ಮನೆಗೆ ಹಿಂದಿರುಗಿ ಅವಳನ್ನು ಕ್ರೂರವಾಗಿ ಥಳಿಸಲಾಗುತ್ತಿತ್ತು. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮೊದಲು, ನೆರೆಹೊರೆಯ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ಅವಳನ್ನು ಥಳಿಸಲಾಯಿತು. ಹತಾಶೆಗೆ ಒಳಗಾದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಅವರು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *