Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟೆಹ್ರಾನ್: ಇರಾನ್‌ನ ಡ್ರೋನ್, ರಾಡಾರ್ ನೆಲೆಗಳ ಮೇಲೆ ಅಮೆರಿಕಾ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಹೈ ಅಲರ್ಟ್!

Spread the love

ಟೆಹ್ರಾನ್: ಗೋರುಕ್ ನಗರ ಹಾಗೂ ಕ್ವೆಶ್ ದ್ವೀಪದಲ್ಲಿನ ಇರಾನ್‌ನ ಸೇನಾ ನೆಲೆಗಳ ಮೇಲೆ ಅಮೆರಿಕಾ ದಾಳಿ ನಡೆಸಿರುವ ಬಗ್ಗೆ Aljazeera ವರದಿ ಮಾಡಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಗೊರುಕ್ ನಗರ ಮತ್ತು ಕ್ವೆಸ್ಟ್ ದ್ವೀಪದಲ್ಲಿರುವ ಇರಾನಿನ ರಾಡಾ‌ರ್ ಮತ್ತು ಡೋನ್ ನೆಲೆಗಳ ಮೇಲೆ “ಸ್ವಯಂ ರಕ್ಷಣಾ ದಾಳಿ” ನಡೆಸಿರುವುದಾಗಿ ಹೇಳಿದೆ.
ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ MQ1 ಡೋನ್ ಅನ್ನು ಹೊಡೆದುರುಳಿಸಿರುವುದು ಸೇರಿದಂತೆ “ಇರಾನಿನ ಆಕ್ರಮಣಕಾರಿ ಕ್ರಮಗಳಿಗೆ” ಅಮೆರಿಕ ಪ್ರತಿಕ್ರಿಯಿಸುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.

ಇರಾನ್ ಪ್ರತಿಕ್ರಿಯೆ:
ದಕ್ಷಿಣ ಇರಾನ್ ಮೇಲೆ ದಾಳಿ ನಡೆಸಲು ಬಳಸಿದ್ದ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿರುವುದಾಗಿ ಐಆರ್‌ಜಿಸಿ ಹೇಳಿದೆ.
ಇರಾನ್‌ನ ಸಿರಿಕ್ ದ್ವೀಪದಲ್ಲಿರುವ ಟೆಲಿಕಾಂ ಟವರ್ ಮೇಲೆ ದಾಳಿ ನಡೆಸಲು ಬಳಸಲಾಗಿದ್ದ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ ಎಂದು Fars news agency ವರದಿ ಮಾಡಿದೆ.
ಇದಲ್ಲದೆ ಕುವೈತ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದ್ದು, ದೇಶದಾದ್ಯಂತ ಎಚ್ಚರಿಕೆ ಸೈರನ್‌ಗಳು ಮೊಳಗಿರುವುದಾಗಿಯೂ ವರದಿಯಾಗಿದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.


Spread the love
Share:

administrator

Leave a Reply

Your email address will not be published. Required fields are marked *