Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಪಹರಣಕಾರನ ಸಂಚು ವಿಫಲ: ಕಣ್ಣೆದುರೇ ಮಗುವನ್ನು ಎತ್ತೊಯ್ದ ಪಾಪಿ

Spread the love

ರಷ್ಯಾ: ರಷ್ಯಾದಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಕಿರುಚುತ್ತಿದ್ದ 5 ವರ್ಷದ ಪುಟ್ಟ ಹೆಣ್ಣು ಮಗಳನ್ನು ಬಲವಂತವಾಗಿ ಎತ್ತಿಕೊಂಡು ಕಟ್ಟಡದ ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದ ಸಣ್ಣ ಬಾಲಕನೊಬ್ಬ ತಕ್ಷಣವೇ ಎಚ್ಚೆತ್ತುಕೊಂಡು, ಕಟ್ಟಡದ ಮುಖ್ಯ ಬಾಗಿಲು ಮುಚ್ಚದಂತೆ ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿ ಇತರರ ಸಹಾಯ ಬೇಡಿದ್ದಾನೆ. ಬಾಲಕನ ಈ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಅಪಹರಣಕಾರನ ಸಂಚು ವಿಫಲಗೊಂಡಿದ್ದು, ಮಗು ಸುರಕ್ಷಿತವಾಗಿ ಪಾರಾಗಿದೆ. ಸಾರ್ವಜನಿಕರ ಸಹಾಯದಿಂದ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಧೈರ್ಯ ತೋರಿದ ಆ ಪುಟ್ಟ ಬಾಲಕನ ಸಾಹಸಕ್ಕೆ ಜಗತ್ತಿನಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *