Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನರ್ಮದಾ-ಕ್ಷಿಪ್ರಾ ಪೈಪ್‌ಲೈನ್ ಸ್ಫೋಟ; ಮುಗಿಲೆತ್ತರಕ್ಕೆ ಚಿಮ್ಮಿದ ನೀರು, ಮನೆಗಳಿಗೆ ನುಗ್ಗಿದ ಜಲಪ್ರವಾಹ!

Spread the love

ಇಂದೋರ್: ಇದ್ದಕ್ಕಿದ್ದಂತೆ ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟಗೊಂಡಿದ್ದು, ನೀರು ಮುಗಿಲೆತ್ತರಕ್ಕೆ ಚಿಮ್ಮಿರುವ ವಿಡಿಯೋ ವೈರಲ್ ಆಗಿದೆ. ಇಂದೋರ್-ಖಂಡ್ವಾ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪೈಪ್​ಲೈನ್ ಒಡೆದ ಪರಿಣಾಮ ನೀರು ರಸ್ತೆಯ ಮೇಲೆ ಪ್ರವಾಹದಂತೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿತ್ತು. ದೊಡ್ಡ ಪ್ರಮಾಣದ ನೀರು ಸುತ್ತಮುತ್ತಲಿನ ಪ್ರದೇಶದಾದ್ಯಂತ ಹರಡಿ ಹಲವಾರು ಮನೆಗಳಿಗೆ ನುಗ್ಗಿ, ಮನೆಯ ಸಾಮಾನುಗಳಿಗೆ ಹಾನಿಯಾಯಿತು.ಈ ಪೈಪ್‌ಲೈನ್ ಓಂಕಾರೇಶ್ವರದಿಂದ ಉಜ್ಜಯಿನಿಯವರೆಗೆ ಚಲಿಸುವ ನರ್ಮದಾ-ಕ್ಷಿಪ್ರಾ ಯೋಜನೆಯ ಭಾಗವಾಗಿದೆ ಎಂದು ಸ್ಥಳೀಯ ನಿವಾಸಿ ಹೇಳಿದ್ದಾರೆ. ಸುಮಾರು ಒಂದು ಗಂಟೆ ಕಾಲ ನೀರಿನ ಹರಿವು ಜೋರಾಗಿದ್ದು, ಬೆಳಗ್ಗೆ 8.30 ರ ಸುಮಾರಿಗೆ ನೀರು ಸರಬರಾಜು ಸ್ಥಗಿತಗೊಂಡಾಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತು.


Spread the love
Share:

administrator

Leave a Reply

Your email address will not be published. Required fields are marked *