Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅರುಣಾಚಲ ಗಡಿಯಲ್ಲಿ ಚೀನಾ ಸೇನೆ ಜೊತೆ ಮುಖಾಮುಖಿ ಮುಂದುವರಿಕೆ: ಐಟಿಬಿಪಿ ಡಿಜಿ ಶತ್ರುಜೀತ್ ಕಪೂರ್ ಅಧಿಕೃತ ದೃಢೀಕರಣ!

Spread the love

ಹೊಸದಿಲ್ಲಿ: ಅರುಣಾಚಲ ಪ್ರದೇಶದ ಗಡಿಯ ಹಲವು ಸ್ಥಳಗಳಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ ಮುಂದುವರಿದಿದೆ ಎಂದು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ತಿಳಿಸಿದ್ದಾರೆ. ಈ ಮೂಲಕ ಈಶಾನ್ಯ ಭಾರತದ ಗಡಿಯಲ್ಲಿ ನಡೆಯುತ್ತಿರುವ ಮುಖಾಮುಖಿ ಕುರಿತು ಮೊದಲ ಬಾರಿಗೆ ಅಧಿಕೃತ ದೃಢೀಕರಣ ದೊರೆತಿದೆ.
ಐಟಿಬಿಪಿ ಸಿಬ್ಬಂದಿಯನ್ನು ಗೌರವಿಸುವ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಲ್ಲಿ ಅರುಣಾಚಲದ ಹಲವು ಸ್ಥಳಗಳಲ್ಲಿ ಮುಖಾಮುಖಿಯ ಪರಿಸ್ಥಿತಿ ಉಂಟಾಗಿತ್ತು. ಅದು ಇನ್ನೂ ಮುಂದುವರಿದಿದೆ’ ಎಂದು ಹೇಳಿದರು.

ಮುಖಾಮುಖಿ ಸಂಘರ್ಷದ ಸಂದರ್ಭದಲ್ಲಿ ಐಟಿಬಿಪಿಯ ನೂತನವಾಗಿ ರಚಿಸಲಾದ ಶೌರ್ಯ’ ಕಮಾಂಡೊಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಎತ್ತರದ ಪರ್ವತ ಪ್ರದೇಶಗಳಲ್ಲಿ ಯುದ್ಧ ನಡೆಸುವ ವಿಶೇಷ ತರಬೇತಿ ಪಡೆದಿರುವ ಈ ಕಮಾಂಡೊಗಳು ಮಾದರಿ ಕಾರ್ಯನಿರ್ವಹಣೆ ತೋರಿದ್ದಾರೆ ಎಂದು ಅವರು ಹೇಳಿದರು.
1962ರಲ್ಲಿ ಸ್ಥಾಪನೆಯಾದ ಐಟಿಬಿಪಿ, ಚೀನಾದೊಂದಿಗಿನ 3,488 ಕಿಲೋಮೀಟರ್ ಉದ್ದದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಗಡಿ ಭದ್ರತೆಯ ಜವಾಬ್ದಾರಿ ನಿರ್ವಹಿಸುತ್ತಿದೆ.
“ಐಟಿಬಿಪಿಯನ್ನು ಪರ್ವತ ಪ್ರದೇಶಗಳಲ್ಲಿ ಗೆರಿಲ್ಲಾ ಕಾರ್ಯಾಚರಣೆ ನಡೆಸುವ ಪಡೆಯಾಗಿ ಸ್ಥಾಪಿಸಲಾಗಿತ್ತು. 2004ರಲ್ಲಿ ಚೀನಾದೊಂದಿಗಿನ ಗಡಿ ಕಾಯುವ ಜವಾಬ್ದಾರಿಯನ್ನು ನಮಗೆ ವಹಿಸಲಾಯಿತು” ಎಂದು ಕಪೂ‌ರ್ ಹೇಳಿದರು.
ಚೀನಾದ ಗಡಿಯನ್ನು ಅತ್ಯಂತ ಸವಾಲಿನ ಗಡಿ ಎಂದು ಬಣ್ಣಿಸಿದ ಅವರು, ಗಡಿ ಪ್ರದೇಶಗಳಲ್ಲಿರುವ ಎಲ್ಲ ಘಟಕಗಳಲ್ಲಿ ಡೋನ್ ತುಕಡಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಗಲ್ವಾನ್‌ನಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ವಿಶೇಷ ಯುದ್ಧ ತರಬೇತಿ ಕಾರ್ಯಕ್ರಮ ರೂಪಿಸಲಾಗಿದ್ದು, ಭೂಗತ ಮೂಲಸೌಕರ್ಯವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *