ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ: ವಿಜೃಂಭಣೆಯಿಂದ ಜರುಗಿದ ಪೂರ್ವಭಾವಿ ಸಭೆ!

ಕದ್ರಿ:ಐತಿಹಾಸಿಕ ಕದ್ರಿ ಯೋಗೇಶ್ವರ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿರುವ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ’ದ ಪೂರ್ವಭಾವಿ ಸಭೆಯು ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ಜರುಗಿದೆ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹಾಗೂ ಧರ್ಮಪ್ರೇಮಿಗಳು ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗಾಗಿ ಸಮಾಲೋಚನೆ ನಡೆಸಿ, ಕೈಜೋಡಿಸಿದ್ದಾರೆ.

ಜಗದಾಚಾರ್ಯ ಸ್ವಾಮಿ ಅಖಿಲೇಶ್ಜೀ ಮಹಾರಾಜ್ ಸೇವಾ ಸಂಸ್ಥಾನ (ರಿ.)ಹಾಗು ದ ಸ್ಯಾಫ್ರನ್ ಫ್ರಂಟ್ ವತಿಯಿಂದ ಆಗಸ್ಟ್ 24ರಿಂದ 28ರವರೆಗೆ ಈ ಮಹಾಯಜ್ಞ ನಡೆಯಲಿದ್ದು.ಶ್ರೀ ಶ್ರೀ ೧೦೦೮ ರಾಜಯೋಗಿ ನಿರ್ಮಲನಾಥ್ಜೀ ಮಹಾರಾಜ್ ಅವರ ಆಶೀರ್ವಾದದೊಂದಿಗೆ ಹಾಗೂ ವಾರಣಾಸಿಯ ಆಚಾರ್ಯ ಶ್ರೀ ಲವಕುಶ್ ಮಿಶ್ರಾ ಅವರ ಪುರೋಹಿತ್ತ್ಯದಲ್ಲಿ ಈ ಧರ್ಮ ಕಾರ್ಯ ಜರುಗಲಿದೆ.
ಧರ್ಮಪ್ರೇಮಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು-ಮನ-ಧನಗಳನ್ನು ಅರ್ಪಿಸಿ ಈ ಪುಣ್ಯ ಕಾರ್ಯದ ಯಶಸ್ಸಿಗೆ ಕಾರಣರಾಗಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.