ರಷ್ಯಾ-ಉಕ್ರೇನ್ ಯುದ್ಧ: ಪೂರ್ವ ಉಕ್ರೇನ್‌ನ ಐದು ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ!

ಮಾಸ್ಕೊ: ತನ್ನ ಸಶಸ್ತ್ರ ಪಡೆಗಳು ಪೂರ್ವ ಉಕ್ರೇನ್ನನ ಐದು ಹಳ್ಳಿಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ರವಿವಾರ ಘೋಷಿಸಿದೆ.
ಮುಂಚೂಣಿಯ ಕಾರ್ಯಾಚರಣೆಗಳನ್ನು ವಿಸ್ತರಿಸಿದ್ದು ಖಾರ್ಕಿವ್ ಪ್ರಾಂತದ ಶೈಕಿವ್ಯಾ ನೋವಿ ಮಿರ್. ಚೆರ್ನೆಶ್ಚಿನಾ ಮತ್ತು ದ್ರುಝಲ್ಯುಬಿವ್ಯಾ ಹಳ್ಳಿಗಳು, ಡೊನೆಟ್ಸ್ ಪ್ರಾಂತದ ವಸಿಲಿವ್ಯಾ ಹಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೆ ತಿಳಿಸಿದೆ.
