Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರವಿಶಾಸ್ತ್ರಿ ನನ್ನ ಸಾರ್ವಕಾಲಿಕ ನೆಚ್ಚಿನ ಹೆಡ್ ಕೋಚ್: ಅನುಭವಿ ವೇಗಿ ಮೊಹಮ್ಮದ್ ಶಮಿ ಪ್ರಶಂಸೆ!

Spread the love

ಮುಂಬೈ: ರವಿಶಾಸ್ತ್ರಿ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಹೆಡ್ ಕೋಚ್ ಎಂದು ಭಾರತ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರಿಗೆ ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್ ಅವರಲ್ಲಿ ಯಾರು ಅತ್ಯುತ್ತಮ ಕೋಚ್ ಎಂದು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅವರು, “ರವಿಶಾಸ್ತ್ರಿ ಅವರು ತಮ್ಮ ಸಾರ್ವಕಾಲಿಕ ನೆಚ್ಚಿನ ಕೋಚ್. ರವಿಶಾಸ್ತ್ರಿ ಅವರ ಕೋಚಿಂಗ್ ಶೈಲಿಯಲ್ಲಿದ್ದ ಪ್ರಮುಖ ಅಂಶವೆಂದರೆ ಆಟಗಾರರಿಗೆ ನೀಡುತ್ತಿದ್ದ ಸ್ವಾತಂತ್ರ‍್ಯ. ಮೈದಾನದಲ್ಲಿ ಆಟಗಾರರು ಯಾವುದೇ ಒತ್ತಡವಿಲ್ಲದೆ ತಮ್ಮ ನೈಸರ್ಗಿಕ ಆಟವನ್ನು ಪ್ರದರ್ಶಿಸಲು ಶಾಸ್ತ್ರಿ ಮುಕ್ತ ಅವಕಾಶ ನೀಡುತ್ತಿದ್ದರು” ಎಂದು ಹೇಳಿದ್ದಾರೆ.”ಹಾಗೆಯೇ ರವಿಶಾಸ್ತ್ರಿ ಅವರಲ್ಲಿದ್ದ ಆಕ್ರಮಣಕಾರಿ ಗುಣ ಮತ್ತು ಉತ್ಸಾಹವು ಇಡೀ ತಂಡಕ್ಕೆ ಹರಡುತ್ತಿತ್ತು. ಇದು ತಂಡದಲ್ಲಿ ಯಾವುದೇ ತಂಡದ ವಿರುದ್ಧವೂ ಹೆದರದೆ ಹೋರಾಡುವ ಮನೋಭಾವವನ್ನು ಬೆಳೆಸಿತು. ವಿಶೇಷವಾಗಿ ವಿದೇಶಿ ನೆಲದಲ್ಲಿ ಭಾರತ ಐತಿಹಾಸಿಕ ಜಯ ದಾಖಲಿಸಲು ಈ ಧೈರ್ಯವೇ ಕಾರಣವಾಗಿತ್ತು” ಎಂದಿದ್ದಾರೆ.”ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರ ಅವಧಿಯಲ್ಲಿ ಭಾರತೀಯ ವೇಗದ ಬೌಲಿಂಗ್ ಪಡೆ ಜಾಗತಿಕ ಮಟ್ಟದಲ್ಲಿ ಅಧಿಪತ್ಯ ಸ್ಥಾಪಿಸಿತ್ತು. ತಮ್ಮ ಅವರ ವೃತ್ತಿಜೀವನದ ಅತ್ಯುತ್ತಮ ಟೆಸ್ಟ್ ಪ್ರದರ್ಶನಗಳು ಹೊರಬಂದಿದ್ದೂ ಇದೇ ಅವಧಿಯಲ್ಲಿ. ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿಯೂ ತಾವು ಸಾಕಷ್ಟು ಸಮಯ ಕಳೆದಿದ್ದು, ಅವರಿಂದ ಕ್ರಿಕೆಟ್‌ನ ಹಲವು ಸೂಕ್ಷ್ಮ ವಿಷಯಗಳನ್ನು ಕಲಿತಿದ್ದೇನೆ” ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *