Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉತ್ತರ ಪ್ರದೇಶದಲ್ಲಿ ವರುಣನ ಅಟ್ಟಹಾಸ: ಬಿರುಗಾಳಿ-ಮಳೆಗೆ 56 ಮಂದಿ ಬಲಿ; ಹಲವು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ

Spread the love

ಲಕ್ಕೋ: ಉತ್ತರ ಪ್ರದೇಶದ ವಿವಿಧೆಡೆ ಬುಧವಾರ ಬೀಸಿದ ರಭಸದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಕನಿಷ್ಠ 56 ಮಂದಿ ಮೃತಪಟ್ಟಿದ್ದಾರೆ. ಪ್ರಯಾಗ್‌ರಾಜ್, ಪ್ರತಾಪ್‌ಗಢ, ಭಧೋಲಿ, ಫತೇಪುರ, ಉನ್ನಾವೊ, ಕಾನ್ಸುರ ದೇಹತ್, ಚಂಡೌಲಿ, ಸೋನಭದ್ರಾ ಮತ್ತು ಬದೌನ್ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.
ಪ್ರಯಾಗ್‌ರಾಜ್ ಪ್ರದೇಶದಲ್ಲೇ 16 ಮಂದಿ ಮಳೆಸಂಬಂಧಿ ಅನಾಹುತಗಳಿಂದ ಜೀವ ಕಳೆದುಕೊಂಡಿದ್ದಾರೆ. ಭದೋನಿ ಜಿಲ್ಲೆಯಲ್ಲಿ 16 ಮಂದಿ, ಫತೇಪುರ ಜಿಲ್ಲೆಯಲ್ಲಿ ಒಂಬತ್ತು, ಉನ್ನಾವೊದಲ್ಲಿ ನಾಲ್ಕು ಮಂದಿ, ಕಾನ್ಸುರ ದೇಹತ್‌ನಲ್ಲಿ ಮೂವರು, ಬುದೌನ್ ಜಿಲ್ಲೆಯಲ್ಲಿ ಐದು ಮಂದಿ, ಚಂದೌಲಿಯಲ್ಲಿ ಇಬ್ಬರು, ಸೋನಭದ್ರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಮಾಹಿತಿಯಿಂದ ತಿಳಿದುಬಂದಿದೆ.

ರಾಜ್ಯ ಸರ್ಕಾರ ಇನ್ನೂ ಜೀವಹಾನಿಯ ಬಗ್ಗೆ ಕ್ರೋಢೀಕೃತ ವರದಿಯನ್ನು ಬಿಡುಗಡೆ ಮಾಡಿಲ್ಲ. ಅಂಕಿ ಅಂಶಗಳನ್ನು ಕಲೆಹಾಕುವ ಕಾರ್ಯ ಪ್ರಗತಿಯಲ್ಲಿದ್ದು, ಇದಾದ ಬಳಿಕ ರಾಜ್ಯ ಸರ್ಕಾರ ಪರಿಹಾರವನ್ನು ಘೋಷಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಕಾಲಿಕ ಮಳೆ, ರಭಸದ ಗಾಳಿ, ಸಿಡಿಲು ಬಡಿದು ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯ 24 ಗಂಟೆಗಳ ಒಳಗಾಗಿ ನಡೆಯಬೇಕು ಎಂದು ಆದೇಶಿಸಿದ್ದಾಗಿ ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.
ರಾಜ್ಯದ ವಿವಿಧೆಡೆಗಳಲ್ಲಿ ರಭಸದ ಗಾಳಿ ಮತ್ತು ಮಳೆಯಿಂದ ಮರಗಳು ಬಿದ್ದಿರುವುದು, ವಿದ್ಯುತ್ ಕಂಬಗಳು ಧರಾಶಾಯಿಯಾಗಿರುವ ಮತ್ತು ಮನೆಗಳು ಹಾನಿಗೀಡಾಗಿರುವ ವರದಿಗಳು ಬರುತ್ತಿವೆ ಎಂದು ಬದೌಲಿ ಜಿಲ್ಲಾಧಿಕಾರಿ ಕನ್ವರ್ ವೀರೇಂದ್ರ ಕುಮಾರ್ ಮೌರ್ಯ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *