Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುತ್ತೂರು: ವಿಂಡ್‌ಸ್ಕ್ರೀನ್ ಹಾಗೂ ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಳವಡಿಸಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಕಠಿಣ ಕ್ರಮ!

Spread the love

ಪುತ್ತೂರು: ವಾಹನ ಚಾಲನೆಗೆ ಅಡ್ಡಿಯಾಗುವಂತೆ ವಿಂಡ್‌ಸ್ಕ್ರೀನ್ ಗ್ಲಾಸ್‌ಗಳಿಗೆ ಸ್ಟಿಕ್ಕರ್ ಅಳವಡಿಸಿ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವಂತೆ ಸ್ಟಿಕ್ಕರ್ ಹಾಕಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ವಾಹನಗಳ ವಿರುದ್ಧ ಪುತ್ತೂರು ಸಂಚಾರ ಠಾಣಾ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ.

ಸಾರ್ವಜನಿಕರು ಯಾವುದೇ ಉತ್ಸವಗಳು, ಹಬ್ಬ ಹರಿದಿನಗಳು ಅಥವಾ ಖಾಸಗಿ ಕಾರ್ಯಕ್ರಮಗಳ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ಒಂದು ವೇಳೆ ನಿಯಮ ಮೀರಿ ಸಂಚರಿಸಿದರೆ ಅಂತಹ ವಾಹನಗಳು ಹಾಗೂ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಸಂಚಾರ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *