Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಾಂಡಿಯಾ ಹೆಸರಿನಲ್ಲಿ ಪಬ್ ಪಾರ್ಟಿ: ಬಜರಂಗದಳ ಆಗ್ರಹ, ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಎಚ್ಚರಿಕೆ!

Spread the love

ಮಂಗಳೂರು : ನವರಾತ್ರಿ ಆಚರಣೆಯ ಭಾಗವಾದ ‘ದಾಂಡಿಯಾ/ಗರ್ಬಾ’ ಹೆಸರಿನಲ್ಲಿ ಮಂಗಳೂರು ನಗರದ ಪಬ್‌ಗಳು, ಪಾರ್ಟಿ ಹಾಲ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಡಿಜೆ ಮ್ಯೂಸಿಕ್ ಹಾಗೂ ಅಶ್ಲೀಲ ಪಾರ್ಟಿಗಳನ್ನು ಆಯೋಜಿಸುವುದಕ್ಕೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದು ಬಜರಂಗದಳ ಮತ್ತು ದುರ್ಗಾವಾಹಿನಿ ಆಗ್ರಹಿಸಿವೆ.ಇನ್ನೊಂದೆಡೆ, ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ಮಂಗಳೂರಿನಲ್ಲಿ ದಾಂಡಿಯಾ ಹೆಸರಿನಲ್ಲಿ ಪಬ್ ಪಾರ್ಟಿ ಆಯೋಜಿಸುತ್ತಿರುವ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದಾಂಡಿಯಾದ ನೆಪದಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ (Drugs) ಸರಬರಾಜು ಮಾಡುವ ಮತ್ತು ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಕುತಂತ್ರ ನಡೆಯುತ್ತಿದೆ ಎಂದು ಬಜರಂಗದಳ ಆರೋಪಿಸಿದೆ. ಯುವಜನತೆಯನ್ನು ದುರ್ಮಾರ್ಗಕ್ಕೆ ಎಳೆಯುವ ಇಂತಹ ಯಾವುದೇ ಅಸಭ್ಯ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಹಾಗೂ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಾಂತ ಮಾತೃಶಕ್ತಿ ಪ್ರಮುಖ್ ಸುರೇಖಾ ರಾಜ್ ಹಾಗೂ ಜಿಲ್ಲಾ ಬಜರಂಗದಳ ಸಂಯೋಜಕ್ ಪ್ರೀತಮ್ ಕಾಟಿಪಳ್ಳ ನೇತೃತ್ವದ ನಿಯೋಗ ಪೊಲೀಸ್ ಉಪ ಆಯುಕ್ತರಿಗೆ (DCP) ಮನವಿ ಸಲ್ಲಿಸಿದೆ.

ಹಿಂದೂ ಸಂಘಟನೆಗಳ ಆಗ್ರಹದ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ಯಾವುದೇ ಸ್ಥಳದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ. ನಿಯಮಬಾಹಿರವಾಗಿದ್ದರೆ ಪೊಲೀಸರೇ ಅಂತಹ ಕಾರ್ಯಕ್ರಮಗಳನ್ನು ರದ್ದುಪಡಿಸುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ. “ಅದನ್ನು ಬಿಟ್ಟು ಯಾರೇ ಆಗಲಿ ಸ್ವತಃ ತಾವೇ ತೆರಳಿ ಕಾರ್ಯಕ್ರಮ ರದ್ದುಪಡಿಸುತ್ತೇವೆ ಎಂದು ಕಾನೂನನ್ನು ಕೈಗೆತ್ತಿಕೊಂಡರೆ ಅದು ಗಂಭೀರ ಅಪರಾಧವಾಗುತ್ತದೆ. ಕಾನೂನುಬಾಹಿರವಾಗಿ ಕಾರ್ಯಕ್ರಮಗಳನ್ನು ತಡೆದು ಬೆದರಿಕೆಯೊಡ್ಡಿದರೆ ಅಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು, ಜಾಗರೂಕರಾಗಿರಿ” ಎಂದು ಕಮಿಷನರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *