ಬೆಳಗಾವಿ ಅಧಿವೇಶನದಲ್ಲಿ ಕರಾವಳಿ ಭಾಗದ ಸಮಸ್ಯೆಗಳ ಚರ್ಚೆಗೆ ಆದ್ಯತೆ – ಸಲೀಂ ಅಹಮ್ಮದ್.

ಮಂಗಳೂರು: ಡಿಸೆಂಬರ್ 2 ರಿಂದ 11 ರವರೆಗೆ ಒಂಬತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು. ಜನರ ಸಮಸ್ಯೆಗಳ ಚರ್ಚೆಗೆ ಒತ್ತು ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈಗಾಗಲೇ ಮನವಿಗಳು ಬಂದಿವೆ. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ‘ಸೋಜಾ, ಮಂಜುನಾಥ್ ಭಂಡಾರಿ ಮತ್ತು ಪಿ.ವಿ. ಮೋಹನ್ ಅವರು ವಿಶೇಷವಾಗಿ ಚರ್ಚಿಸಲು ಅವಕಾಶ ಕೋರಿದ್ದು, ಜನರ ಸಮಸ್ಯೆಗಳಿಗೆ ಚರ್ಚಿಸಲು ಅವಕಾಶ ಮಾಡಿಕೊಡುವುದಾಗಿ ಸಲಿಂ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.