Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಗ್ರ ಕೃತ್ಯಗಳಿಗೆ ಹಣ ಹೊಂದಿಸಲು ಭೂಮಿ ಮಾರಾಟಕ್ಕೆ ಯತ್ನ: ಪಾಕ್‌ನಲ್ಲಿ ಅಡಗಿರುವ 5 ಉಗ್ರರ ಆಸ್ತಿ ಮುಟ್ಟುಗೋಲು

Spread the love

ಶ್ರೀನಗರ: ಉಗ್ರ ಕೃತ್ಯಗಳಿಗೆ ಹಣ ಹೊಂದಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ (Jammu and Kashmir) ಭೂಮಿಯನ್ನು (Property) ಮಾರಾಟ ಮಾಡಲು ಭಯೋತ್ಪಾದಕರು (Terrorists) ಯತ್ನಿಸಿದ್ದು, ಆ ಜಾಗವನ್ನು ಪೊಲೀಸರು (Police) ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಕಾಶ್ಮೀರದ ಐವರು ಉಗ್ರರು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು. ಅವರ ಹೆಸರಿನಲ್ಲಿ ರಿಯಾಸಿ ಜಿಲ್ಲೆಯ ಮಹೋರ್ ಮತ್ತು ಚಸ್ಸಾನಾದಲ್ಲಿ ಆಸ್ತಿ ಇತ್ತು. ಈ ಆಸ್ತಿಯನ್ನು ಉಗ್ರ ಕೃತ್ಯಗಳಿಗೆ ಹಣಕಾಸು ಒದಗಿಸಲು ಮಾರಾಟ ಮಾಡಲು ಸಂಬಂಧಿಗಳು ಹಾಗೂ ಕುಟುಂಬಸ್ಥರ ಮೂಲಕ ಯತ್ನಿಸುತ್ತಿದ್ದರು. ಈ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ಅಧಿಕಾರಿಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 

ಮಾಹೋರ್‌ನ ಶಾಡೋಲ್‌ನ ಮೊಹಮ್ಮದ್ ಕಯೂಮ್ ಅಲಿಯಾಸ್ ಅಬ್ದುಲ್ ಕಯೂಮ್‌ನ 2 ಕನಾಲ್ (Unit of Land Measurement) ಮತ್ತು 7.5 ಮರ್ಲಾ (25 ಚದರ ಗಜ = 1 ಮರ್ಲಾ) ಭೂಮಿ, ಬದ್ದರ್‌ನ ಬಶೀರ್ ಅಹ್ಮದ್ ಅಲಿಯಾಸ್ ಮಸೂಮ್‌ನ 3 ಕನಾಲ್ ಮತ್ತು 8 ಮರ್ಲಾ ಭೂಮಿ, ಹಂಡರ್‌ನ ಶೋಕತ್ ಅಲಿಯ 3 ಕನಾಲ್, 10 ಮರ್ಲಾ ಭೂಮಿ ಮತ್ತು 15 ಕನಾಲ್ ಭೂಮಿ, ಥುರೂನ ಖಾಂಟಿಯ ಮಂಜೂರ್ ಅಹ್ಮದ್ ಅಲಿಯಾಸ್ ಮಂಜೂರ್ ಹುಸೇನ್‌ನ 15 ಕನಾಲ್ ಮತ್ತು 19 ಮರ್ಲಾ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಐವರು ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಿಯಾಸಿ ಬೆಟ್ಟಗಳಲ್ಲಿ ಸಕ್ರಿಯವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಾಗಾಟದಲ್ಲಿ ತೊಡಗಿದ್ದಾರೆ. ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಿ ಉಗ್ರ ಸಂಘಟನೆಗಳಿಗೆ ಸೇರಿಸುವ ಕೆಲಸದಲ್ಲಿ ಇವರೆಲ್ಲ ತೊಡಗಿಕೊಂಡಿದ್ದಾರೆ. 1991 ಮತ್ತು 2003ರ ನಡುವೆ ಕಾಣೆಯಾಗಿದ್ದ ಮಹೋರ್ ಮತ್ತು ಚಸ್ಸಾನಾದ ಹೆಚ್ಚಿನ ಸಂಖ್ಯೆಯ ಯುವಕರು ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.ಭಯೋತ್ಪಾದಕನಿಗೆ ತನ್ನ ಆಸ್ತಿಯನ್ನು ಮಾರಾಟ ಮಾಡಲು ಸಹಾಯ ಮಾಡುವುದು ಅವನಿಗೆ ಬಂದೂಕನ್ನು ತೆಗೆದುಕೊಳ್ಳಲು ಸಹಾಯ ಮಾಡುವಷ್ಟೇ ಅಪರಾಧವಾಗಿದೆ. ಈಗ ನಾವು ಕೈಗೊಂಡ ಕ್ರಮ ಉಗ್ರರ ಪರ ಕೆಲಸ ಮಾಡುವವರಿಗೆ ರವಾನಿಸಿರುವ ಸ್ಪಷ್ಟ ಸಂದೇಶವಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *