Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಪರೇಷನ್ ಸಿಂಧೂರ್: ಪಾಕಿಸ್ತಾನದ ಕಿರಾನಾ ಹೀಲ್ಸ್ ಮೇಲಿನ ಡ್ರೋನ್ ದಾಳಿಯ ಬಗ್ಗೆ ಮಾಜಿ CDS ಜನರಲ್ ಅನಿಲ್ ಚೌಹಾಣ್ ಸ್ಪಷ್ಟನೆ!

Spread the love

ನವದೆಹಲಿ: ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನದ ಪರಮಾಣು ಕೇಂದ್ರಕ್ಕೆ ಸಂಬಂಧಿಸಿದ ಕಿರಾನಾ ಹೀಲ್ಸ್‌ ಮೇಲೆ ಭಾರತೀಯ ಡ್ರೋನ್ ದಾಳಿ ನಡೆದಿತ್ತೇ ಎಂಬ ಪ್ರಶ್ನೆಗೆ ಇದೀಗ ಮಾಜಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವರ್ಷ ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಪಾಕಿಸ್ತಾನದ ಸರ್ಗೋಧಾ ಸಮೀಪದ ಕಿರಾನಾ ಹಿಲ್ಸ್‌ಗೆ ಭಾರತೀಯ ‘ಲಾಯಿಟರಿಂಗ್ ಮ್ಯುನಿಷನ್’ (ಸ್ಫೋಟಕ ಹೊತ್ತ ಡ್ರೋನ್) ಅಪ್ಪಳಿಸಿತ್ತು. ಆದರೆ, ಕಿರಾನಾ ಹೀಲ್ಸ್‌ಗಳನ್ನು ಭಾರತ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.ಭಾರತ ಸೇನೆ, ಸರ್ಗೋಧಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ರಾಡಾರ್‌ಗಳನ್ನು ಹುಡುಕಲು ಮದ್ದುಗುಂಡುಗಳುಳ್ಳ ಡ್ರೋನ್‌ಗಳನ್ನು ಕಳುಹಿಸಿತ್ತು. ಈ ಡ್ರೋನ್‌ಗಳು ನಿರ್ದಿಷ್ಟ ಗುರಿಯನ್ನು ಹುಡುಕುತ್ತಾ ಕೆಲ ಗಂಟೆಗಳ ಕಾಲ ಆಕಾಶದಲ್ಲಿ ಸಂಚರಿಸಬಲ್ಲವು. ಆದರೆ, ನಿಗದಿತ ಸಮಯದೊಳಗೆ ಗುರಿ ಸಿಗದಿದ್ದರೆ, ಇಂತಹ ಡ್ರೋನ್‌ಗಳು ಕಾರ್ಯಾಚರಣೆ ವೇಳೆ ಬಿದ್ದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಕಿರಾನಾ ಹೀಲ್ಸ್‌ಗಳಲ್ಲಿರುವ ಪ್ರದೇಶವೊಂದಕ್ಕೆ ಡ್ರೋನ್ ಅಪ್ಪಳಿಸಿದೆ ಎಂದು ಜನರಲ್ ಚೌಹಾಣ್ ವಿವರಿಸಿದ್ದಾರೆ.ದಾಳಿಯ ಬಳಿಕ ಕಿರಾನಾ ಹೀಲ್ಸ್‌ನಲ್ಲಿನ ಒಂದು ಕಟ್ಟಡದ ಮೇಲ್ಛಾವಣಿಯಲ್ಲಿ ದೊಡ್ಡ ಬಿರುಕು ಕಂಡುಬಂದಿತ್ತು. ಕಟ್ಟಡದ ಸುತ್ತಮುತ್ತ ಅವಶೇಷಗಳು ಹರಡಿಕೊಂಡಿದ್ದವು. ಆದ್ದರಿಂದ ದಾಳಿಯಿಂದ ಕೇವಲ ಒಂದೇ ಕಟ್ಟಡಕ್ಕೆ ಹಾನಿಯಾಗಿದೆ ಎಂಬುದು ತಿಳಿದುಬಂದಿತ್ತು.ಈ ಮೂಲಕ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಕಿರಾನಾ ಹೀಲ್ಸ್‌ ಬಳಿ ನಡೆದ ಘಟನೆಯ ಬಗ್ಗೆ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇದೀಗ ಮಾಜಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಿಂದ ಸ್ಪಷ್ಟನೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *