Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಭುಗಿಲೆದ್ದ ಇಸ್ರೇಲ್-ಯುಎನ್ ರಾಯಭಾರಿಗಳ ವಾಕ್ಸಮರ; ಅಧಿಕಾರಿಗಳಿಗೆ ‘ಮೌನವಾಗಿರಿ’ ಎಂದ ಡ್ಯಾನಿ ಡ್ಯಾನನ್!

Spread the love

ನ್ಯೂಯಾರ್ಕ್: ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್ ಮತ್ತು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವೆ ನ್ಯೂಯಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ವಾಕ್ಸಮರ ನಡೆದಿರುವ ಬಗ್ಗೆ ವರದಿಯಾಗಿದೆ.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ತಡೆ ಕುರಿತ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ.
ಯುದ್ಧ ಪೀಡಿತ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿದ್ದ ವಿಶ್ವಸಂಸ್ಥೆಯ ಪ್ರತಿನಿಧಿ ಪ್ರಮೀಳಾ ಪಾಟನ್ ವಿರುದ್ಧ ವಾಗ್ದಾಳಿ ನಡೆಸಿದ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್, ಪ್ರಮೀಳಾ ಅವರು ತಾರತಮ್ಯ ಎಸಗಿದ್ದಾರೆ.
ಆದ್ದರಿಂದ ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಮೀಳಾ ಅವರು ಸಲ್ಲಿಸಿದ್ದ ವರದಿಯಲ್ಲಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ಲೈಂಗಿಕ ಹಿಂಸಾಚಾರ ಆರೋಪಗಳ ಹಿನ್ನೆಲೆಯಲ್ಲಿ ಇಸ್ರೇಲ್ ಅನ್ನು ಮೊದಲ ಬಾರಿಗೆ ಯುಎನ್ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.
ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರನ್ನು ಉಲ್ಲೇಖಿಸಿ, “ನೀವು ಇಸ್ರೇಲ್ ಅನ್ನು ಗುರಿಯಾಗಿಸುವ ಸೆಕ್ರೆಟರಿ ಜನರಲ್‌ ಅವರ ಧೋರಣೆಗೆ ಮಣಿದಿದ್ದೀರಿ” ಎಂದು ಡ್ಯಾನನ್ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿಶ್ವಸಂಸ್ಥೆಯ ಪ್ರತಿನಿಧಿ ವನೆಸ್ಸಾ ಪ್ರೇಝಿಯರ್, “ವೈಯಕ್ತಿಕ ದಾಳಿ ನಿಲ್ಲಿಸಿ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಡ್ಯಾನನ್‌, ಪ್ರೇಝಿಯರ್ ಅವರಿಗೆ ಮೌನವಾಗಿರುವಂತೆ ಗದರಿದರು. ನಾವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರ, ನೀವು ನೌಕರರು ಮಾತ್ರ. ಮೊದಲು ನೀವು ಸುಮ್ಮನಿರಿ ಎಂದು ಹೇಳಿದರು.
“ನೀವು ಈ ನಿಲುವು ಏಕೆ ತೆಗೆದುಕೊಂಡಿದ್ದೀರಿ ಎಂಬುದು ನಮಗೆ ತಿಳಿದಿದೆ. ಈ ನಾಚಿಕೆಗೇಡಿನ ಅಭಿಯಾನದ ಭಾಗವಾಗಲು ನಾವು ನಿಮಗೆ ಅವಕಾಶ ನೀಡುವುದಿಲ್ಲ. ನಾನು ನನ್ನ ಮಾತನ್ನು ಪೂರ್ಣಗೊಳಿಸುತ್ತೇನೆ” ಎಂದು ಡ್ಯಾನನ್ ಹೇಳಿದರು.
ಈ ವೇಳೆ ವನೆಸ್ಸಾ ಪ್ರೇಝಿಯರ್ ಮಧ್ಯಪ್ರವೇಶಿಸಿದ್ದು ಸಭೆಯ ಆಯೋಜಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
“ಈ ವೇಳೆ ನನ್ನ ಮಾತು ಕೇಳಲು ಇಷ್ಟವಿಲ್ಲದಿದ್ದರೆ, ಹೊರಗೆ ಹೋಗಿ” ಎಂದು ಡ್ಯಾನಿ ಡ್ಯಾನನ್ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *