ಹೊಸದಿಲ್ಲಿ: ರಿಲಯನ್ಸ್ ವಿರುದ್ಧ ಟೆಲಿಗ್ರಾಮ್ ಸಿಇಒ ಗಂಭೀರ ಆರೋಪ; ಇಂಟರ್ನೆಟ್ ಹೈಜಾಕ್ ತಂತ್ರದ ವಾರ್!

ಹೊಸದಿಲ್ಲಿ: ಭಾರತದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಟೆಲಿಗ್ರಾಮ್ನ ಸೇವೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದು, ಇಂಟರ್ನೆಟ್ ಸಂಪರ್ಕದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪಾವೆಲ್ ಡುರೊವ್, ಟೆಲಿಗ್ರಾಮ್ ನ ನೆಟ್ವರ್ಕ್ ಮಾರ್ಗಗಳ ಮೇಲೆ ಪರಿಣಾಮ ಬೀರಲು ‘ಬಾರ್ಡರ್ ಗೇಟ್ಟೇ ಪ್ರೋಟೋಕಾಲ್ (BGP) ಹೈಜಾಕಿಂಗ್ ಎಂದು ಕರೆಯಲ್ಪಡುವ ತಂತ್ರವನ್ನು ರಿಲಯನ್ಸ್ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಪ್ರಕಾರ, ಈ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ಪ್ರದೇಶಗಳ ಬಳಕೆದಾರರ ಮೇಲೆ ಕೂಡ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಭಾರತದ ಟೆಲಿಕಾಂ ರಿಲಯನ್ಸ್ ‘ಬಿಜಿಪಿ ಹೈಜಾಕಿಂಗ್’ ಎಂಬ ವಿಧಾನದ ಮೂಲಕ ಭಾರತದ ಹೊರಗಿನ ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಅಡ್ಡಿಪಡಿಸುತ್ತಿದೆ ಎಂದು ಡುರೊವ್ ಹೇಳಿದ್ದಾರೆ.
BGP ಎಂದರೆ ಒಂದು ಪ್ರಮುಖ ಇಂಟರ್ನೆಟ್ ರೂಟಿಂಗ್ ಸಿಸ್ಟಮ್ ಆಗಿದೆ. ಜಗತ್ತಿನಾದ್ಯಂತ ಇರುವ ವಿವಿಧ ಇಂಟರ್ನೆಟ್ ಸೇವಾ ಪೂರೈಕೆದಾರರು, ಡೇಟಾ ಸೆಂಟರ್ಗಳು ಮತ್ತು ದೊಡ್ಡ ನೆಟ್ವರ್ಕ್ಗಳ ನಡುವೆ ಡೇಟಾ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದನ್ನು BGP ನಿರ್ಧರಿಸುತ್ತದೆ.
ಸೈಬರ್ ಭದ್ರತಾ ತಜ್ಞರ ಪ್ರಕಾರ, ಅನಧಿಕೃತ ಮಾರ್ಗಗಳ ಘೋಷಣೆಗಳು ಗಂಭೀರ ಸಮಸ್ಯೆಯಾಗಿದ್ದು, ಇವು ಇಂಟರ್ನೆಟ್ ಟ್ರಾಫಿಕ್ ಅನ್ನು ಅದರ ನಿಗದಿತ ಮಾರ್ಗದಿಂದ ಬೇರೆಡೆಗೆ ತಿರುಗಿಸಬಹುದು. ಈ ಅಡಚಣೆಯು ಉದ್ದೇಶಪೂರ್ವಕವಾಗಿರುವಂತೆ ಕಾಣುತ್ತದೆ ಎಂದು ಡುರೊವ್ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ವರದಿಗಳಿಗೆ ರಿಲಯನ್ಸ್ ಪ್ರತಿಕ್ರಿಯಿಸಲು ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಂದೇಶ ವಿನಿಮಯ ವೇದಿಕೆಗಳಲ್ಲಿನ ಪೈಪೋಟಿಯೊಂದಿಗೆ ಈ ಬೆಳವಣಿಗೆ ಸಂಬಂಧ ಹೊಂದಿರಬಹುದು ಎಂಬ ಅನುಮಾನವನ್ನು ಡುರೋವ್ ವ್ಯಕ್ತಪಡಿಸಿದ್ದಾರೆ.

“ಈ ಅಡ್ಡಿಯು ಉದ್ದೇಶಪೂರ್ವಕವಾಗಿ ನಡೆದಿರುವಂತೆ ತೋರುತ್ತದೆ. ಏಕೆಂದರೆ, ಈ ಕುರಿತು ಸಲ್ಲಿಸಿದ ಹಲವು ವರದಿಗಳನ್ನು ರಿಲಯನ್ಸ್ ನಿರ್ಲಕ್ಷಿಸಿದೆ. ಈ ಸಮಸ್ಯೆಯು ವಾಟ್ಸಾಪ್ ಜೊತೆಗಿನ ಪೈಪೋಟಿಗೆ ಸಂಬಂಧಿಸಿರಬಹುದು. ವಾಟ್ಸಾಪ್, ಫೇಸ್ಟುಕ್ ಮತ್ತು ಇನ್ನಾಗ್ರಾಂ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯೊಂದಿಗೆ ರಿಲಯನ್ಸ್ಗೆ ವ್ಯವಹಾರಿಕ ಸಂಬಂಧಗಳಿವೆ” ಎಂಬುದನ್ನು ಅವರು ಉಲ್ಲೇಖಿಸಿದರು.
ಆದರೆ, ಡುರೋವ್ ಅವರ ಈ ಆರೋಪಗಳಿಗೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ
ಜೂನ್ 21ರಂದು ನಡೆಯಲಿರುವ NEET(UG)-2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಗೆ ಜೂನ್ 22ರವರೆಗೆ ನಿರ್ಬಂಧಿಸಲಾಗಿದೆ. ಈ ಮಧ್ಯೆಯೇ ಈ ಆರೋಪ ಕೇಳಿ ಬಂದಿದೆ.