Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸದಿಲ್ಲಿ/ನಗೋಯಾ: ಏಷ್ಯನ್ ಗೇಮ್ಸ್ ವುಶು ಕ್ರೀಡೆಯಲ್ಲಿ ಭಾರತದ ನವೊರೆಮ್ ರೋಷಿಬಿನಾ ದೇವಿಗೆ ಬೆಳ್ಳಿ ಪದಕ!

Spread the love

ಹೊಸದಿಲ್ಲಿ/ ನಗೋಯಾ: ಗುರುವಾರ ನಡೆದ ಏಷ್ಯನ್ ಗೇಮ್ಸ್ನ ಮಹಿಳೆಯರ ಸಾಂಡಾ 60 ಕೆಜಿ ವಿಭಾಗದ ಫೈನಲ್ ನಲ್ಲಿ ಭಾರತದ ವುತು ಪಟು ನವೊರೆಮ್ ರೋಷಿಬಿನಾ ದೇವಿ, ಚೀನಾದ ಝಾಂಗ್ ಶಿಯಾವೋಯು ವಿರುದ್ಧ 0-2 ಅಂತರದಿಂದ ಸೋತು ಸತತ ಎರಡನೇ ಬಾರಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಚಿನ್ನದ ಪದಕದ ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಚೀನಾದ ಝಾಂಗ್, ಎರಡೂ ಸುತ್ತುಗಳನ್ನು 5-0 ಅಂತರದಿಂದ ಗೆದ್ದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು.
ಸತತ ಮೂರು ಪದಕ ಗೆದ್ದ ಮೊದಲ ಭಾರತೀಯ ವನಿತೆ
ಇದರೊಂದಿಗೆ ರೋಪಿಬಿನಾ ದೇವಿ ಏಷ್ಯನ್ ಗೇಮ್ಸ್ನ ವುತು ಕ್ರೀಡೆಯಲ್ಲಿ ಸತತ ಮೂರು ಬಾರಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅವರು 2018ರಲ್ಲಿ ಕಂಚು, 2022 ಮತ್ತು 2026ರಲ್ಲಿ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
2022ರ ಹ್ಯಾಂಗೌ ಏಷ್ಯನ್ ಗೇಮ್ಸ್ ನಲ್ಲೂ ಬೆಳ್ಳಿ ಗೆದ್ದಿದ್ದ ರೋಷಿಬಿನಾ, ಆಗಲೂ ಫೈನಲ್ ನಲ್ಲಿ ಚೀನಾದ ಕ್ಸಿಯಾವೊವಿ ವಿರುದ್ಧ ಸೋಲುಂಡಿದ್ದರು.
ಜಪಾನ್ ನಲ್ಲಿ ನಡೆದ ಈ ಬಾರಿಯ ಕ್ರೀಡಾಕೂಟದಲ್ಲಿ ರೋಷಿಬಿನಾ ಅವರ ಅಭಿಯಾನ ಗಮನಾರ್ಹವಾಗಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ವಿಯೆಟ್ನಾಂನ 2023ರ ವಿಶ್ವ ಚಾಂಪಿಯನ್ ನ್ಯುಯನ್ ಥೀ ಥು ಥುಯಿ ಅವರನ್ನು ಮಣಿಸಿದ್ದರು.
ರೋಷಿಬಿನಾ ಗೆದ್ದ ಬೆಳ್ಳಿ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 14ಕ್ಕೆ ಏರಿದ್ದು ಇದರಲ್ಲಿ ಒಂದು ಚಿನ್ನ, ಆರು ಬೆಳ್ಳಿ ಮತ್ತು ಎಳು ಕಂಚಿನ ಪದಕಗಳು ಸೇರಿವೆ.


Spread the love
Share:

administrator

Leave a Reply

Your email address will not be published. Required fields are marked *