ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: 17 ಸಾಧಕರಿಗೆ ಅರ್ಜುನ ಪ್ರಶಸ್ತಿ; ಈ ಬಾರಿಯೂ ತಪ್ಪಿದ ಖೇಲ್ ರತ್ನ ಗೌರವ!

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟವಾಗಿದ್ದು 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ಪ್ರಕಟಿಸಿದೆ. ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಪಟ್ಟಿಯನ್ನು ಆರು ತಿಂಗಳ ಬಳಿಕ ಮರುಪರಿಶೀಲನೆಗೆ ಒಳಪಡಿಸಿದ ಸಚಿವಾಲಯವು ಅಂತಿಮವಾಗಿ 17 ಮಂದಿ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲು ಅನುಮತಿ ನೀಡಿದೆ.

2014ರ ಬಳಿಕ ಪ್ರತಿಷ್ಠಿತ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಯಾವುದೇ ಕ್ರೀಡಾಪಟುವಿಗೂ ನೀಡದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಆದರೆ ಅಂತಿಮ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಅರ್ಜುನ ಪ್ರಶಸ್ತಿಗಾಗಿ ಸಮಿತಿಯು 24 ಹೆಸರುಗಳನ್ನು ಕಳುಹಿಸಿಕೊಟ್ಟಿತ್ತಾದರೂ, ಪ್ರಶಸ್ತಿಯ ಘನತೆ ಮತ್ತು ಅರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಸಚಿವಾಲಯವು ಕೇವಲ 17 ಮಂದಿಯ ಹೆಸರನ್ನು ಅಂತಿಮಗೊಳಿಸಿದೆ.ತೇಜಸ್ವಿನ್ ಶಂಕರ್ (ಅಥ್ಲೆಟಿಕ್ಸ್), ಪ್ರಿಯಾಂಕಾ ಗೋಸ್ವಾಮಿ (ಅಥ್ಲೆಟಿಕ್ಸ್), ಮುಹಮ್ಮದ್ ಅಜ್ಮಲ್ (ಅಥ್ಲೆಟಿಕ್ಸ್), ನರೇಂದರ್ (ಬಾಕ್ಸಿಂಗ್), ವಿದಿತ್ ಗುಜರಾತಿ (ಚೆಸ್), ದಿವ್ಯಾ ದೇಶಮುಖ್ (ಚೆಸ್), ಧನುಷ್ ಶ್ರೀಕಾಂತ್ (ಕಿವುಡರ ಶೂಟಿಂಗ್), ರಾಜ್‌ಕುಮಾರ್ ಪಾಲ್ (ಹಾಕಿ), ಲಾಲ್ರೆಮ್ಸಿಯಾಮಿ (ಹಾಕಿ), ಸುರ್ಜಿತ್ (ಕಬಡ್ಡಿ), ಪೂಜಾ (ಕಬಡ್ಡಿ), ರುದ್ರಾಂಶ್ ಖಂಡೇಲ್‌ವಾಲ್ (ಪ್ಯಾರಾ ಶೂಟಿಂಗ್), ಏಕ್ತಾ ಭ್ಯಾನ್ (ಪ್ಯಾರಾ ಅಥ್ಲೆಟಿಕ್ಸ್), ಅರವಿಂದ್ ಸಿಂಗ್ (ರೋಯಿಂಗ್), ಅಖಿಲ್ ಶಿಯೋರಾನ್ (ಶೂಟಿಂಗ್), ತ್ರೀಸಾ ಜೋಲಿ (ಬ್ಯಾಡ್ಮಿಂಟನ್), ಗಾಯತ್ರಿ ಗೋಪಿಚಂದ್ (ಬ್ಯಾಡ್ಮಿಂಟನ್).
ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ): ಐ. ಅರುಮೈನಾಯಗಂ (ಫುಟ್‌ಬಾಲ್ – 1962ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ತಂಡದ ಸದಸ್ಯ)ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ): ಚೋಟೆ ಲಾಲ್ ಯಾದವ್ (ಬಾಕ್ಸಿಂಗ್), ಪರ್ವೀರ್ ಸಿಂಗ್, ನೇಹಾ ಚವಾಣ್ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ ವಿಭಾಗ): ಧರ್ಮೇಂದ್ರ ಯಾದವ್, ವೀರೇಂದ್ರ ಕುಮಾರ್1991ರಲ್ಲಿ ಪ್ರಶಸ್ತಿ ಆರಂಭವಾದ ಬಳಿಕ ಅತ್ಯಂತ ತಡವಾಗಿ ಪ್ರಕಟಗೊಂಡ ಪ್ರಶಸ್ತಿ ಇದಾಗಿದೆ. ಈ ಬಾರಿಯ ಪಟ್ಟಿಯಲ್ಲೂ ಯಾವುದೇ ಕ್ರಿಕೆಟಿಗರಿಗೆ ಸ್ಥಾನ ಸಿಕ್ಕಿಲ್ಲ. 2023ರಲ್ಲಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿದ ಬಳಿಕ ಕ್ರಿಕೆಟಿಗರು ಈ ಗೌರವಕ್ಕೆ ಆಯ್ಕೆಯಾಗಿಲ್ಲ.ಖೇಲ್ ರತ್ನ ಪ್ರಶಸ್ತಿಯು 25 ಲಕ್ಷ ರೂ. ಹಾಗೂ ಅರ್ಜುನ ಪ್ರಶಸ್ತಿಯು 15 ಲಕ್ಷ ರೂ. ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.