Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುದ್ಧ ಭೀತಿ ನಡುವೆ ಟೆಹ್ರಾನ್ ಆಕಾಶದಲ್ಲಿ ನಿಗೂಢ ಪ್ರಕಾಶಮಾನ ವಸ್ತು ಹಾರಾಟ

Spread the love

ಟೆಹ್ರಾನ್: ಯುದ್ಧದ ಕಾರ್ಮೋಡದ ನಡುವೆ ಇರಾನ್ ರಾಜಧಾನಿಯಲ್ಲಿ ನಿಗೂಢ ವಸ್ತುವೊಂದರ ಹಾರಾಟ ಜನರಲ್ಲಿ ಆತಂಕ ಮೂಡಿಸಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಯುದ್ಧದ ಭೀತಿ ಮತ್ತು ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ರಾತ್ರಿ ನಿಗೂಢ, ಪ್ರಕಾಶಮಾನವಾದ ಬಹುವರ್ಣದ ಬೆಳಕುಗಳನ್ನು ಹೊಂದಿರುವ ವಸ್ತುವೊಂದು ಹಾರಾಟ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಚ್ಚರಿಯೆಂದರೆ, ಜಗತ್ಪಸಿದ್ಧ 1976 ರ ಟೆಹ್ರಾನ್ ಯುಎಫ್‌ಒ ಘಟನೆ” ನಡೆದು ಬರೋಬ್ಬರಿ 50 ವರ್ಷಗಳಾಗುತ್ತಿರುವ ಹೊತ್ತಿನಲ್ಲೇ ಈ ವಿದ್ಯಮಾನ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಹಾಗೂ ಚರ್ಚೆಗೆ ನಾಂದಿ ಹಾಡಿದೆ.
ಅಜಾದೇಗನ್‌ ಎಕ್ಸ್‌ಪ್ರೆಸ್‌ವೇ ಬಳಿ ಪತ್ತೆ: ಸೆಪ್ಟೆಂಬರ್ 20 ರಂದು ಸೆರೆಹಿಡಿಯಲಾಗಿದೆ ಎನ್ನಲಾದ ಈ ವಿಡಿಯೋಗಳಲ್ಲಿ, ಟೆಹ್ರಾನ್‌ನ ಅಜಾದೇಗನ್‌ ಎಕ್ಸ್‌ಪ್ರೆಸ್‌ವೇ ಮೇಲ್ಬಾಗದಲ್ಲಿ ಕಡಿಮೆ ಎತ್ತರದಲ್ಲಿ ಮಿನುಗುವ ವಿಚಿತ್ರ ಬೆಳಕಿನ ವಸ್ತುವೊಂದು ನಿಧಾನವಾಗಿ ಹಾರಾಡುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ: ಈ ದೃಶ್ಯಗಳ ಬೆನ್ನಲ್ಲೇ ನೆಟ್ಟಿಗರು ನಾನಾ ರೀತಿಯ ಊಹೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಸುಧಾರಿತ ಮಿಲಿಟರಿ ಕಣ್ಣಾವಲು ಡೋನ್ ಇರಬಹುದು, ಎಲ್‌ಇಡಿ ಲೈಟ್‌ ಗಳನ್ನು ಹೊಂದಿರುವ ಗಾಳಿಪಟಗಳಿರಬಹುದು ಅಥವಾ ಗುರುತಿಸಲಾಗದ ಹಾರುವ ವಸ್ತು (UFO) ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈ ವಸ್ತುವಿನ ನಿಖರವಾದ ಎತ್ತರ, ವೇಗ ಅಥವಾ ಸ್ವರೂಪದ ಬಗ್ಗೆ ಇರಾನ್ ಸರ್ಕಾರವಾಗಲಿ ಅಥವಾ ಸೇನಾ ಅಧಿಕಾರಿಗಳಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ ಅಥವಾ ಇದನ್ನು ಭದ್ರತಾ ಬೆದರಿಕೆ ಎಂದು ಅಧಿಕೃತವಾಗಿ ಘೋಷಿಸಿಲ್ಲ.ಯುದ್ಧ ಭೀತಿಯ ನಡುವೆ ಆತಂಕ: ಒಂದು ವೇಳೆ ದೇಶದ ಮೇಲೆ ಮತ್ತೆ ದಾಳಿ ನಡೆದರೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸೇನೆ ಎಚ್ಚರಿಕೆ ನೀಡಿದೆ. ವಿಮಾನ ರದ್ದತಿ ಮತ್ತು ವಾಯುಪ್ರದೇಶ ನಿರ್ಬಂಧದ ನಡುವೆ ಈ ನಿಗೂಢ ಬೆಳಕು ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಮಿಲಿಟರಿ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಾದ ಯುಎಫ್‌ಒ ಘಟನೆಗಳಲ್ಲಿ ಟೆಹ್ರಾನ್ ಘಟನೆ ಪ್ರಮುಖವಾದದ್ದು. ಅಂದು ಟೆಹ್ರಾನ್ ಆಕಾಶದಲ್ಲಿ ಅತ್ಯಂತ ತೀಕ್ಷ್ಮವಾದ ಬೆಳಕಿನ ವಸ್ತುವೊಂದು ಕಂಡಾಗ, ಇಂಪೀರಿಯಲ್ ಇರಾನಿಯನ್ ವಾಯುಪಡೆಯು ಅದನ್ನು ಬೆನ್ನಟ್ಟಲು ಎರಡು ‘ಎಫ್-4 ಫ್ಯಾಂಟಮ್ II ಫೈಟರ್ ಜೆಟ್‌ಗಳನ್ನು ಕಳುಹಿಸಿತ್ತು.ತಾಂತ್ರಿಕ ವೈಫಲ್ಯದ ರಹಸ್ಯ: ವರದಿಗಳ ಪ್ರಕಾರ, ಫೈಟರ್ ಜೆಟ್‌ಗಳು ಆ ವಸ್ತುವಿನ ಸಮೀಪಕ್ಕೆ ಹೋದ ತಕ್ಷಣವೇ ವಿಮಾನಗಳ ರೇಡಾರ್, ಕಮ್ಯುನಿಕೇಷನ್ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಜೆಟ್‌ಗಳು ದೂರ ಸರಿದ ಬಳಿಕವಷ್ಟೇ ಉಪಕರಣಗಳು ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದ್ದವು.
ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (DIA) ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆಯ (NSA) ಆರ್ಕೈವ್ ದಾಖಲೆಗಳಲ್ಲಿ ಈ 1976 ರ ಘಟನೆಯ ವಿವರವಾದ ವರದಿಗಳಿವೆ.
ವಾಸ್ತವ ವಿಶ್ಲೇಷಣೆ: 1976 ರ ಘಟನೆಗೂ ಈಗ ಕಾಣಿಸಿಕೊಂಡಿರುವ ಬೆಳಕಿಗೂ ನೇರ ಸಂಬಂಧವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಎಲೆಕ್ಟ್ರಾನಿಕ್ ವಾರ್‌ಫೇ‌ರ್ ಮತ್ತು ಅತ್ಯಾಧುನಿಕ ರಹಸ್ಯ ಡೋನ್‌ಗಳ ಬಳಕೆ ಹೆಚ್ಚಿರುವುದರಿಂದ, ಇದು ರಹಸ್ಯ ಮಿಲಿಟರಿ ಕಣ್ಣಾವಲು ತಂತ್ರಜ್ಞಾನದ ಭಾಗವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *