ಕುರ್ ಕುರೆ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ ಐದು ವರ್ಷದ ಮಗು ದಾರುಣ ಸಾ*ವು!

ಮೈಸೂರು: ಕುರ್ ಕುರೆ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಘಟನೆ ಆಗಸ್ಟ್ 1 ರಂದು ನಡೆದಿದೆ.

ಗೌರಿಪುರ ಗ್ರಾಮದ ಸಂತೋಷ್-ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ ಮುಕುಂದ್ ಮಯೂರ್(5) ಮೃತಪಟ್ಟ ಮಗು.ಶನಿವಾರ ಮಗು ಅಳುತ್ತಿದ್ದುದನ್ನು ಕಂಡು ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಲ್ಲಿ ಕುರ್ ಕುರೆ ಪ್ಯಾಕೆಟ್ ಕೊಡಿಸಿದ್ದಾರೆ. ಕುರ್ ಕುರೆ ಪ್ಯಾಕೆಟ್ನಲ್ಲಿ ಪ್ಲಾಸ್ಟಿಕ್ ಬಾಲ್ ಇತ್ತು. ಈ ಬಾಲನ್ನು ಮಗು ಕುರ್ ಕುರೆಯೊಂದಿಗೆ ನುಂಗಿದೆ.ತಕ್ಷಣವೇ ಆ ಬಾಲ್ ಗಂಟಲಿಗೆ ಅಡ್ಡವಾಗಿ ಸಿಕ್ಕಿಕೊಂಡು ಮಗು ಉಸಿರಾಡಲು ಪರದಾಡಿ ಒದ್ದಾಡತೊಡಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಮನೆಯವರು ಕೂಡಲೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಮಗು ಉಸಿರುಗಟ್ಟಿ ಕೊನೆಯುಸಿರೆಳೆದಿದೆ.