ಐಐಟಿ-ಬಾಂಬೆ ಕ್ಯಾಂಪಸ್‌ನಲ್ಲಿ ಚಿರತೆಯ ಭೀತಿ; ಸಿಸಿಟಿವಿಯಲ್ಲಿ ಸೆರೆಯಾಯಿತು ನಾಯಿಯ ಮೇಲಿನ ದಾಳಿ!

ಮುಂಬೈ: ಶುಕ್ರವಾರ ಬೆಳಗಿನ ಜಾವ ಪೊವೈನಲ್ಲಿರುವ ಐಐಟಿ-ಬಾಂಬೆ ಕ್ಯಾಂಪನ್ ಒಳಗೆ ವಯಸ್ಕ ಚಿರತೆಯೊಂದು ನಾಯಿಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಬೆಳಗಿನ ಜಾವ 2.30 ರ ಸುಮಾರಿಗೆ ಚಿರತೆ ಸಿಬ್ಬಂದಿ ಹಾಸ್ಟೆಲ್ ಒಳಗೆ ಬಂದು ಸ್ಥಳೀಯ ಸಮುದಾಯದ ನಾಯಿಯ ಮೇಲೆ ದಾಳಿ ಮಾಡಿ, ನಂತರ ಅದನ್ನು ಪೊದೆಗಳ ಕಡೆಗೆಎಳೆದುಕೊಂಡು ಹೋಗಿದೆ ಎಂದು ನಿವಾಸಿ ಉಪನ್ಯಾಸಕರು ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಮನುಷ್ಯರಿಗೆ ಹಾನಿಯಾಗಿಲ್ಲ.
“ಈ ಚಿರತೆ ವೀಕ್ಷಣೆಯ ಕುರಿತು ನಾವು ಕ್ಯಾಂಪಸ್ ಭದ್ರತಾ ಸಿಬ್ಬಂದಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಬೇಕಾಗಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಹತ್ತಿರದಲ್ಲೇ ಇರುವುದರಿಂದ, ಪೊವಾಯಿ ಕ್ಯಾಂಪಸ್‌ನಲ್ಲಿ ಚಿರತೆಗಳು ಹಲವು ವರ್ಷಗಳಿಂದ ಹೆಚ್ಚಾಗಿ ಕಂಡುಬರುತ್ತಿವೆ” ಎಂದು ಗೌರವ ವನ್ಯಜೀವಿ ವಾರ್ಡನ್ ಮತ್ತು RAWW ಎನ್‌ಜಿಒ ಸ್ಥಾಪಕ ವವನ್ ಶರ್ಮಾ ಹೇಳಿದರು.
ಮಾನವ-ವನ್ಯಜೀವಿಗಳ ಮುಖಾಮುಖಿಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ವಿವಿಧ ಮುನ್ನೆಚ್ಚರಿಕೆಗಳ ಬಗ್ಗೆ ಸಲಹೆ ನೀಡಲು ಅವರು ಐಐಟಿ-ಬಿ ಆಡಳಿತದೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ಶರ್ಮಾ ಹೇಳಿದರು.
ಈ ವರ್ಷದ ಆರಂಭದಲ್ಲಿ, ದಿಂಡೋಶಿಯ ರಹೇಜಾ ಹೈಟ್ಸ್ ಸಂಕೀರ್ಣದಲ್ಲಿ ಮತ್ತು ಥಾಣೆಯ ವಾಗ್ಗೆ ಕೈಗಾರಿಕಾ ಎಸ್ಟೇಟ್‌ನಲ್ಲಿಯೂ ಚಿರತೆ ಕಾಣಿಸಿಕೊಂಡಿತ್ತು.
ಆಹಾರಕ್ಕಾಗಿ ಬೇಟೆಯಾಡಲು ಚಿರತೆಗಳು ಹೆಚ್ಚಾಗಿ ರಾತ್ರಿ ತಡವಾಗಿ ಮಾನವ ವಸತಿ ಪ್ರದೇಶಗಳಿಗೆ ಬರುತ್ತವೆ.
