Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆದ ಕೆ.ಆರ್.ಪೇಟೆ ಪುರಸಭೆಯ ಚೆಕ್: ಸರ್ಕಾರದ ಆರ್ಥಿಕ ಮುಗ್ಗಟ್ಟು ಬಹಿರಂಗ!

Spread the love

ಮಂಡ್ಯ: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಕುರಿತು ಆರ್ಥಿಕ ಇಲಾಖೆಯು ಎಚ್ಚರಿಕೆ ಪತ್ರ ನೀಡಿರುವ ಬೆನ್ನಲ್ಲೇ, ಸ್ಥಳೀಯ ಸಂಸ್ಥೆಯೊಂದರ ನಿರ್ಲಕ್ಷ್ಯ ಹಾಗೂ ಹಣಕಾಸಿನ ಮುಗ್ಗಟ್ಟು ಬಹಿರಂಗಗೊಂಡಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪುರಸಭೆ ನೀಡಿದ್ದ ಚೆಕ್ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಹೌದು, ಜಾಹೀರಾತು ವೆಚ್ಚಕ್ಕಾಗಿ ಕೆ.ಆರ್.ಪೇಟೆ ಪುರಸಭೆಯು ‘ಜ್ಞಾನಭಾರತಿ ಪ್ರಕಾಶನ’ ಸಂಸ್ಥೆಗೆ 18,093 ರೂಪಾಯಿಗಳ ಚೆಕ್ ನೀಡಿತ್ತು. ಆದರೆ, ಪ್ರಕಾಶನ ಸಂಸ್ಥೆಯು ಹಣ ಡ್ರಾ ಮಾಡಲು ಬ್ಯಾಂಕ್‌ಗೆ ಹೋದಾಗ ಪುರಸಭೆಯ ಖಾತೆಯಲ್ಲಿ ಹಣವಿಲ್ಲದೆ ಚೆಕ್ ವಾಪಸ್ (ಬೌನ್ಸ್) ಬಂದಿದೆ. ಬ್ಯಾಂಕ್ ಸಿಬ್ಬಂದಿ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಒಂದು ಕಡೆ ಆರ್ಥಿಕ ಇಲಾಖೆಯು ಸರ್ಕಾರದ ಖಜಾನೆ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದರೆ, ಮತ್ತೊಂದೆಡೆ ಕೇವಲ 18 ಸಾವಿರ ರೂಪಾಯಿಗೂ ಅಧಿಕ ಹಣವಿಲ್ಲದೆ ಸರ್ಕಾರಿ ಕಚೇರಿಯ ಚೆಕ್ ಬೌನ್ಸ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ‘ಸರ್ಕಾರ ಅಷ್ಟೇ ಅಲ್ಲ, ಸರ್ಕಾರಿ ಕಚೇರಿಗಳು ಕೂಡ ದಿವಾಳಿಯಾಗಿವೆಯೇ?’ ಎಂದು ಸಾರ್ವಜನಿಕರು ಆಕ್ರೋಶ ಹಾಗೂ ವ್ಯಂಗ್ಯವಾಡುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *